ಮಡಿಕೇರಿ: ನೆರೆ ಸಂತ್ರಸ್ತರ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ

Update: 2019-09-26 18:34 GMT

ಮಡಿಕೇರಿ, ಸೆ. 25: ಮಹಾಮಳೆಯಿಂದ ಮನೆಗಳನ್ನು ಕಳೆದುಕೊಂಡ ಸುಮಾರು 15 ಕುಟುಂಬಗಳಿಗೆ ಕೊಡಗು ಜಿಲ್ಲಾ ಸಮಸ್ತ ಜಂಇಯ್ಯತ್ತುಲ್ ಉಲಮಾ, ನಿರ್ಮಿಸಿ ಕೊಡುವ ಮನೆಗಳ ಪೈಕಿ ಪ್ರಥಮ ಮನೆಯ ಶಿಲಾನ್ಯಾಸ ಕಾರ್ಯವನ್ನು ಕೇರಳದ ಜಂಇಯ್ಯತ್ತುಲ್ ಉಲಮಾದ ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್, ಎಮ್ಮೆಮಾಡುವಿನಲ್ಲಿ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ದೇವರ ಪರೀಕ್ಷೆಯಾಗಿದ್ದು, ಇಂತಹ ಸಂದರ್ಭದಲ್ಲಿ ಸಂಕಷ್ಟಕೀಡಾದವರಿಗೆ ಇತರರು ಆಶ್ರಯ ನೀಡಬೇಕು. ಅಲ್ಲದೇ ತಮ್ಮಿಂದಾದ ಸಹಾಯವನ್ನು ನೀಡಿ ಅವರಿಗೆ ನೆರವಾಗಬೇಕು. ಇದು ಮಾನವ ಧರ್ಮ, ಪ್ರಪಂಚದ ಉಳಿವು ಪರಸ್ಪರ ಸಹಾಯದಿಂದ ಮಾತ್ರ ಎಂದು ಅಭಿಪ್ರಾಯಪಟ್ಟರು.

ಭವನ ನಿರ್ಮಾಣಕ್ಕೆ ಪ್ರಥಮ ದೇಣಿಗೆಯನ್ನು ಕಾಞಂಗಾಡು ಸಂಯುಕ್ತ ಜಮಾಅತ್ ಅಧ್ಯಕ್ಷ ಮೆಟ್ರೋ ಮುಹಮ್ಮದ್ ಹಾಜಿ ಅವರಿಂದ ಅಬ್ದುಲ್ಲ ಪೈಝಿ ಅವರು ಸ್ವೀಕರಿಸಿದರು.

ಕೊಡಗು ಜಿಲ್ಲಾ ಉಪ ಖಾಝಿ ಅಬ್ದುಲ್ಲ ಫೈಝಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಕುಬ್, ಸಂಯುಕ್ತ ಜಮಾಅತ್ ಕಾರ್ಯದರ್ಶಿ ಬಶೀರ್ ವೆಳ್ಳಿಕ್ಕೊತ್ತ್, ಕೆ.ಉಸ್ಮಾನ್ ಹಾಜಿ ಸಿದ್ದಾಪುರ, ಬಶೀರ್ ಹಾಜಿ, ಅಧ್ಯಕ್ಷ ಶಂಸುಲ್ ಉಲಮಾ ಪೆರುಂಬಾಡಿ, ವೈ.ಎಂ. ಉಮ್ಮರ್ ಫೈಝಿ, ಪಿ.ವಿ. ಇಸ್ಮಾಯಿಲ್ ಮುಸ್ಲಿಯಾರ್, ಕೆ.ಪಿ ಅಬೂಬಕ್ಕರ್ ಮೌಲವಿ, ಹಮೀದ್ ಹಾಜಿ, ಮಾಯಿನ್ ಹಾಜಿ ಎಮ್ಮೆಮಾಡು, ಸುಂಟಿಕೊಪ್ಪ ಶರೀಅತ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ, ಮೈದು ಪೈಝಿ ಏಡಪ್ಪಲ, ಆರಿಫ್ ಫೈಝಿ ತಂಲೀಕ್‍ ದಾರಿಮಿ ಇಕ್ಬಾಲ್ ಮೌಲವಿ ಹಸನ್ ಕುಞಿಹಾಜಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಅಶ್ರಫ್ ಫೈಝಿ ಸ್ವಾಗತಿಸಿ, ರಿಯಾಸ್ ಫೈಝಿ ವಂದಿಸಿದರು. ಸಮಾರಂಭಕ್ಕೆ ಸಿ.ಎಮ್. ಹಮೀದ್ ಮೌಲವಿ ಶುಭಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News