ಸಚಿವರ ಭೇಟಿ ಎಂದು?

Update: 2019-09-26 18:36 GMT

ಮಾನ್ಯರೇ,

 ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರನ್ನು ಬಾಗಲಕೋಟೆ ಹಾಗೂ ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ರಾಜ್ಯ ಸರಕಾರ ನೇಮಿಸಿ ಆದೇಶ ಹೊರಡಿಸಿದೆ. ಆದರೆ ನೇಮಕವಾಗಿ ಹಲವು ದಿನಗಳು ಕಳೆದರೂ ಕಲಬುರಗಿಗೆ ಇನ್ನೂ ಭೇಟಿ ನೀಡಿಲ್ಲ.

ಬಿಜೆಪಿ ಸರಕಾರ ರಚನೆಯಾಗಿ ಒಂದು ತಿಂಗಳು ತಡವಾಗಿ ಸಚಿವರ ಘೋಷಣೆ ಮಾಡಿತ್ತು. ಈಗ ಈ ಸಚಿವರೇ ಚಟುವಟಿಕೆಯಲ್ಲಿ ತೊಡಗದಿರುವುದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಮತಹಾಕಿದ ಜನರು ತಮ್ಮ ಕಷ್ಟ ಹೇಳಿಕೊಳ್ಳಲು ಸಚಿವರ ಭೇಟಿಗೆ ದೂರದ ಬೆಂಗಳೂರಿಗೆ ಹೊಗುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಸಮ್ಮಿಶ್ರ ಸರಕಾರ ಇದ್ದಾಗ ಬರೋಬ್ಬರಿ 1 ವರ್ಷದ ಹಿಂದೆ ಕೊನೆಯ ಕರ್ನಾಟಕ ಆಭಿವೃದ್ಧಿ ಮಂಡಳಿ (ಕೆಡಿಬಿ) ಸಭೆ ನಡೆದಿದೆ. ಇನ್ನಾದರೂ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಿ.

-ಪಿ. ಎ. ಸೂರಜ್, ಕಲಬುರಗಿ

Writer - -ಪಿ. ಎ. ಸೂರಜ್, ಕಲಬುರಗಿ

contributor

Editor - -ಪಿ. ಎ. ಸೂರಜ್, ಕಲಬುರಗಿ

contributor

Similar News