ಮಹಿಷ ದಸರಾ ಆಚರಣೆ ಮಾಡುವವರು ವಿಕೃತ ಮನಸ್ಸಿನವರು: ಸಚಿವ ಸಿ.ಟಿ.ರವಿ

Update: 2019-09-28 08:17 GMT

ಮೈಸೂರು: ಮಹಿಷ ದಸರಾ ಆಚರಣೆ ಮಾಡುವವರು ವಿಕೃತ ಮನಸ್ಸಿನವರು, ಅವರ ಮನಸ್ಥಿತಿಯನ್ನು ಸರಕಾರದ ವತಿಯಿಂದ ಉಚಿತವಾಗಿ ಪರೀಕ್ಷೆ ಮಾಡಿಸಿ ಅವರ ಮನೆಯವರಿಗೆ ನೆರವಾಗುವಂತಹ ಕೆಲಸವನ್ನು ಮಾಡಬೇಕಾಗಿದೆ ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಪ್ರಗತಿಪರರು ಮತ್ತು ಸಾಹಿತಿಗಳ ವಿರುದ್ಧ ಹರಿಹಾಯ್ದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ದೇಶವೇ ನಾಡಹಬ್ಬ ಎಂದು ಆಚರಿಸುತ್ತಾ ಇರಬೇಕಾದರೆ ಮಹಿಷ ದಸರಾ ಅಗತ್ಯವಿತ್ತೆ. ಕಳೆದ ಎಂಟು ವರ್ಷಗಳಿಂದ ಇವರ ಆಚರಣೆಗೆ ಅವಕಾಶ ಕೊಟ್ಟಿದ್ದೆ ತಪ್ಪು, ಇಂತಹ ವಿಕೃತ ಮನಸ್ಸಿನವರು ಸಮಾಜದಲ್ಲಿ ಕೆಟ್ಟ ಸಂಪ್ರದಾಯ ಹುಟ್ಟುಹಾಕಲು ಹೊರಟಿದ್ದಾರೆ ಎಂದರು.

ಕೆಲವರಿಗೆ ಈ ದೇಶದ ಸಂಸ್ಕೃತಿ, ಪರಂಪರೆಯನ್ನು ಅವಹೇಳನ ಮಾಡಿ ಬದುಕುವುದೇ ಒಂದು ಉದ್ದೇಶ ಆಗಿದೆ. ನಮ್ಮ ಸಂಸ್ಕೃತಿ,ಪರಂಪರೆ ಸಂಪ್ರದಾಯಗಳ ಬಗ್ಗೆ  ಕೆಟ್ಟದಾಗಿ ಮಾತನಾಡಿದರೆ ಸುಮ್ಮನಿರಲು ಸಾಧ್ಯವೇ ಎಂದರು.

ಸಂಸದ ಪ್ರತಾಪ್ ಸಿಂಹ ಅವರು ಬಳಸಿರುವ ಪದಪ್ರಯೋಗ ಸರಿಯಿಲ್ಲ, ಆದರೆ ಅವರ ಭಾವನೆ ಸರಿ ಇದೆ. ಇಂತಹ ಸಂದರ್ಭದಲ್ಲಿ ನಾನಿದ್ದರೂ ಇದೇ ಭಾವನೆ ವ್ಯಕ್ತಪಡಿಸುತ್ತಿದ್ದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News