ಕರ್ನಾಟಕದ ಪರ ದನಿ ಎತ್ತುವ ಸಂಸದರೇ ಇಲ್ಲ: ಚಕ್ರವರ್ತಿ ಸೂಲಿಬೆಲೆ ಆಕ್ರೋಶ

Update: 2019-09-30 14:24 GMT

ಬೆಂಗಳೂರು, ಸೆ.30: ಕರ್ನಾಟಕದ ಸಂಸದರಿಗೆ ಉತ್ತರ ಕರ್ನಾಟಕದ ಜನರ ಕಣ್ಣೀರು ಯಾಕೆ ಕಾಣುತ್ತಿಲ್ಲ. ಕೇಂದ್ರದಲ್ಲಿ ಕರ್ನಾಟಕದ ದನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರೇ ಇಲ್ಲವಾ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ತಮ್ಮ ಯುವಲೈವ್ ವೆಬ್‌ಸೈಟ್‌ನಲ್ಲಿ ಬರೆದಿರುವ ಅವರು, ಉತ್ತರ ಕರ್ನಾಟಕದಲ್ಲಿ ಪ್ರವಾಹದ ಬಳಿಕ ಅನಂತ್ ಕುಮಾರ್‌ರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಕರ್ನಾಟಕದ ಒಳಿತಿಗಾಗಿ ಕೇಂದ್ರದೊಂದಿಗೆ ಗುದ್ದಾಡಿ ಬೇಕಾದ್ದನ್ನು ಪಡೆದುಕೊಂಡು ಬರಬಲ್ಲ ಸಾಮರ್ಥ್ಯ ಯಾವ ಸಂಸದರಿಗೂ ಇಲ್ಲವಲ್ಲ ಎಂದು ತಿಳಿಸಿದ್ದಾರೆ.

25 ಸಂಸದರು ಬಿಜೆಪಿಯವರಿದ್ದಾರೆ. ಇನ್ನುಳಿದ 3ರಲ್ಲಿ ಇಬ್ಬರಿಗೆ ಇನ್ನೂ ಸಂಸತ್ತಿನ ಬಗ್ಗೆ ತಿಳಿದಿಲ್ಲ. ಇವರಿಗೆ ಅಲ್ಲಿನ ಕಾರ್ಯವೈಖರಿ ಅರ್ಥವಾಗುವಷ್ಟರಲ್ಲಿ ಅವರ ಅವಧಿಯೇ ಮುಗಿಯುತ್ತದೆ. ಇನ್ನೊಬ್ಬ ಕಾಂಗ್ರೆಸ್ ಸಂಸದ ತಮ್ಮ ಅಣ್ಣನನ್ನು ಬಿಡಿಸಿಕೊಂಡು ಬರುವುದರಲ್ಲಿ ಮಗ್ನರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ನಮ್ಮ ಸಂಸದರು ತಮಿಳುನಾಡಿನಿಂದ, ಕೇರಳದ ಸಂಸದರಿಂದ ಕಲಿಯುವುದು ಸಾಕಷ್ಟಿದೆ. ಅವರು ಹಠಕ್ಕೆ ಬಿದ್ದಾದರೂ, ಕೊನೆಗೆ ರಾಜೀನಾಮೆ ಕೊಟ್ಟಾದರೂ ತಮ್ಮ ರಾಜ್ಯದ ಹಿತಾಸಕ್ತಿ ಉಳಿಸಿಕೊಳ್ಳಲು ಕೇಂದ್ರದ ಸಹಕಾರವನ್ನು ತರುತ್ತಾರೆ ಎಂದು ರಾಜ್ಯದ ಸಂಸದರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News