ಪಲ್ಟಿಯಾದ ಖಾಸಗಿ ಬಸ್: 21 ಪ್ರಯಾಣಿಕರು ಮೃತ್ಯು

Update: 2019-09-30 15:03 GMT

ಹೊಸದಿಲ್ಲಿ, ಸೆ.30: ಖಾಸಗಿ ವಿಲಾಸಿ ಬಸ್ಸೊಂದು ಪಲ್ಟಿಯಾದ ಪರಿಣಾಮ 21 ಮಂದಿ ಮೃತಪಟ್ಟು, 50 ಮಂದಿ ಗಾಯಗೊಂಡ ಘಟನೆ ಉತ್ತರ ಗುಜರಾತ್ ನ ಬನಸ್ಕಾಂತದಲ್ಲಿ ಇಂದು ಸಂಭವಿಸಿದೆ.

ಭಾರೀ ಮಳೆಯ ಕಾರಣ ಗುಡ್ಡಗಾಡು ಪ್ರದೇಶದಲ್ಲಿ ಸಂಚರಿಸುತ್ತಿದ್ದ ಬಸ್ ನಿಯಂತ್ರಣ ಕಳೆದುಕೊಂಡ ಪಲ್ಟಿಯಾಯಿತು ಎಂದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರು ಮಾಹಿತಿ ನೀಡಿದ್ದಾರೆ.

ತ್ರಿಶೂಲಿಯಾ ಘಾಟ್ ನಲ್ಲಿ ಪಲ್ಟಿಯಾಗಿರುವ ಬಸ್ಸನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News