ಚೀನಾ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯ 70ನೇ ವಾರ್ಷಿಕ ದಿನಾಚರಣೆ

Update: 2019-10-01 15:45 GMT

ಬೀಜಿಂಗ್, ಅ. 1: ಚೀನಾದ ಕಮ್ಯುನಿಸ್ಟ್ ಪಕ್ಷವು ಮಂಗಳವಾರ ತನ್ನ ಸ್ಥಾಪನೆಯ 70ನೇ ವಾರ್ಷಿಕ ದಿನವನ್ನು ಆಚರಿಸಿತು. ಈ ಸಂದರ್ಭದಲ್ಲಿ ನಡೆದ ಪಥಸಂಚಲನದಲ್ಲಿ ಅದು ತನ್ನ ಆರ್ಥಿಕ ಬೆಳವಣಿಗೆ ಮತ್ತು ಹೊಸ ಅಸ್ತ್ರಗಳನ್ನು ಪ್ರದರ್ಶಿಸಿತು.

  ಚೀನಾ ಧ್ವಜವನ್ನು ಹೊತ್ತ ಸೇನಾ ಗೌರವ ರಕ್ಷೆ ವಾಹನಗಳು ದೇಶದ ರಾಜಕೀಯ ಚಟುವಟಿಕೆಗಳ ಕೇಂದ್ರ ತಿಯನಾನ್ಮೆನ್ ಚೌಕದ ಮೂಲಕ ಹಾದುಹೋಗುವುದರೊಂದಿಗೆ ಸಮಾರಂಭ ಆರಂಭಗೊಂಡಿತು. ಈ ದೃಶ್ಯವನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾವಿರಾರು ಜನರು ವೀಕ್ಷಿಸಿದರು.

ಮಾವೊ ಜಾಕೆಟ್ ಧರಿಸಿದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಇತರ ಚೀನಿ ನಾಯಕರು ಚೌಕದ ಉತ್ತರದ ತುದಿಯಲ್ಲಿ ‘ಗೇಟ್ ಆಫ್ ಹೆವನ್ಲಿ ಪೀಸ್’ನ ತುದಿಯಲ್ಲಿ ನಿಂತು ಕವಾಯತನ್ನು ವೀಕ್ಷಿಸಿದರು.

ಆಂತರಿಕ ಯುದ್ಧದ ಬಳಿಕ, ಅಂದಿನ ನಾಯಕ ಮಾವೊ ಝೆಡಾಂಗ್ 1949 ಅಕ್ಟೋಬರ್ 1ರಂದು ಪೀಪಲ್ಸ್ ರಿಪಬ್ಲಿಕ್ ಅಫ್ ಚೀನಾದ ಸ್ಥಾಪನೆಯನ್ನು ಘೋಷಿಸಿದ್ದರು. ಅದರ ವಾರ್ಷಿಕ ದಿನವನ್ನು ಈಗ ಆಚರಿಸಲಾಗುತ್ತಿದೆ.

ಹಾಂಕಾಂಗ್‌ನಲ್ಲಿ ‘ಒಂದು ದೇಶ, ಎರಡು ವ್ಯವಸ್ಥೆ’ ಪದ್ಧತಿ ಮುಂದುವರಿಕೆ: ಜಿನ್‌ಪಿಂಗ್

ಹಾಂಕಾಂಗ್‌ನಲ್ಲಿ ‘ಒಂದು ದೇಶ, ಎರಡು ವ್ಯವಸ್ಥೆ’ ನಿಯಮ ಮುಂದುವರಿಯುವುದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೋಮವಾರ ಹೇಳಿದ್ದಾರೆ.

ಹಾಂಕಾಂಗ್‌ನಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ಪ್ರಜಾಪ್ರಭುತ್ವಪರ ಧರಣಿಗಳ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷರ ಈ ಹೇಳಿಕೆ ಹೊರಬಿದ್ದಿದೆ.

ಚೀನಾ ಸ್ಥಾಪನೆಯ 70ನೇ ವಾರ್ಷಿಕ ದಿನದ ಮುನ್ನಾ ದಿನ ಬೀಜಿಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News