ಸೆಪ್ಟಂಬರ್‌ನಲ್ಲಿ ಕುಸಿದ ಜಿಎಸ್‌ಟಿ ಸಂಗ್ರಹ: 19 ತಿಂಗಳಲ್ಲೇ ಅತ್ಯಧಿಕ ಇಳಿಕೆ

Update: 2019-10-01 16:42 GMT

 ಹೊಸದಿಲ್ಲಿ, ಅ. 1: ಸೆಪ್ಟಂಬರ್‌ನಲ್ಲಿ ಸರಕು ಹಾಗೂ ಸೇವೆ ತೆರಿಗೆ (ಜಿಎಸ್‌ಟಿ)ಯಿಂದ ಒಟ್ಟು 91,916 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಂಗಳವಾರ ಹೇಳಿದೆ. ಇದು 19 ತಿಂಗಳಲ್ಲೇ ಅತಿ ಕಡಿಮೆ ಜಿಎಸ್‌ಟಿ ಆದಾಯ ಸಂಗ್ರಹ.

ಜಿಎಸ್‌ಟಿ ಆದಾಯ ಸಂಗ್ರಹ 1 ಲಕ್ಷ ಕೋಟಿ ರೂಪಾಯಿ ದಾಟುವಲ್ಲಿ ವಿಫಲವಾಗಿರುವುದು ಇದು ನಿರಂತರ ಎರಡನೇ ತಿಂಗಳು. 2018 ಸೆಪ್ಟಂಬರ್‌ನ ಜಿಎಸ್‌ಟಿ ಆದಾಯ ಸಂಗ್ರಹಕ್ಕಿಂತ ಈ ಸೆಪ್ಟಂಬರ್‌ನ ಆದಾಯ ಸಂಗ್ರಹ ಶೇ. 2.67 ಕಡಿಮೆ. 2018 ಸೆಪ್ಟಂಬರ್‌ನಲ್ಲಿ ಸರಕಾರ 94,442 ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ಸಂಗ್ರಹಿಸಿದೆ. 2019 ಆಗಸ್ಟ್‌ನಲ್ಲಿ 98,202 ಕೋಟಿ ರೂಪಾಯಿ ಜಿಎಸ್‌ಟಿ ಆದಾಯ ಸಂಗ್ರಹಿಸಿದೆ.

ಸೆಪ್ಟಂಬರ್‌ನ ಒಟ್ಟು ಜಿಎಸ್‌ಟಿ ಆದಾಯ ಸಂಗ್ರಹದಲ್ಲಿ 16,630 ಕೋಟಿ ರೂಪಾಯಿ ಕೇಂದ್ರದ ಜಿಎಸ್‌ಟಿ, 25,598 ಕೋಟಿ ರೂಪಾಯಿ ರಾಜ್ಯ ಜಿಎಸ್‌ಟಿ, 45,069 ಕೋಟಿ ರೂಪಾಯಿ ಸಮಗ್ರ ಜಿಎಸ್‌ಟಿ, ಸೆಸ್‌ಗಳ ಮೂಲಕ ಸಂಗ್ರಹಿಸಿದ ಆದಾಯ 7,620 ಕೋಟಿ ರೂಪಾಯಿ ಎಂದು ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News