ಮೂಡಿಗೆರೆ: ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆ

Update: 2019-10-02 06:46 GMT

ಚಿಕ್ಕಮಗಳೂರು, ಅ.2: ವಿವಾಹಕ್ಕೆ ಮನೆಯವರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವ ಪ್ರೇಮಿಗಳು ಮೃತಪಟ್ಟ ಘಟನೆ ಮೂಡಿಗೆರೆಯಿಂದ ವರದಿಯಾಗಿದೆ.

ಮೂಡಿಗೆರೆ ನಿವಾಸಿ ನೂತನ್(25) ಹಾಗೂ ಕೊಟ್ಟಿಗೆಹಾರ ನಿವಾಸಿ ಅಪೂರ್ವಾ(22) ಮೃತಪಟ್ಟವರು. ವಿಷ ಸೇವಿಸಿ ಗಂಭೀರಾವಸ್ಥೆಯಲ್ಲಿದ್ದ ಇವರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಬ್ಬರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪ್ರೇಮಿಗಳಾಗಿದ್ದ ಇವರ ವಿವಾಹಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಇದರಿಂದ ಬೇಸತ್ತ ಜೋಡಿ ಸೋಮವಾರ ಚಿಕ್ಕಮಗಳೂರಿನಲ್ಲಿ ವಿವಾಹಿತರಾಗಿ ಬಳಿಕ ವಿಷ ಸೇವಿಸಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News