ಗುಜರಾತ್, ಜಮ್ಮು-ಕಾಶ್ಮೀರ, ಬಂಗಾಳಕ್ಕೆ ಜಯ

Update: 2019-10-04 04:30 GMT

ಜೈಪುರ, ಅ.3: ವಿಜಯ ಹಝಾರೆ ಟ್ರೋಫಿಯಲ್ಲಿ ಗುರುವಾರ ನಡೆದ ‘ಸಿ’ ಗುಂಪಿನ ಪಂದ್ಯದಲ್ಲಿ ಗುಜರಾತ್ ತಂಡ ಬಿಹಾರ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಬಿಹಾರ ತಂಡ 42.2 ಓವರ್‌ಗಳಲ್ಲಿ ಕೇವಲ 126 ರನ್‌ಗಳಿಗೆ ಆಲೌಟಾಯಿತು. ಗುಜರಾತ್ 19.2 ಓವರ್‌ಗಳಲ್ಲಿ ಗೆಲುವಿನ ದಡ ಸೇರುವುದರೊಂದಿಗೆ ಸತತ ಐದನೇ ಜಯ ದಾಖಲಿಸಿತು.

 ರುಶ್ ಕಲಾರಿಯಾ(2-22) ನೇತೃತ್ವದ ಗುಜರಾತ್‌ನ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಬಿಹಾರ ಬ್ಯಾಟಿಂಗ್ ಕುಸಿತ ಕಂಡಿತು. ಮತ್ತೊಂದು ಪಂದ್ಯದಲ್ಲಿ ಪರ್ವೆಝ್ ರಸೂಲ್ ಅಜೇಯ 118 ರನ್(112 ಎಸೆತ, 9 ಬೌಂಡರಿ,4 ಸಿಕ್ಸರ್)ನೆರವಿನಿಂದ ಜಮ್ಮು-ಕಾಶ್ಮೀರ ತಂಡ ರೈಲ್ವೇಸ್ ವಿರುದ್ಧ 4 ವಿಕೆಟ್‌ಗಳ ಗೆಲುವು ದಾಖಲಿಸಿದೆ. ದಿನದ ಮೂರನೇ ಪಂದ್ಯದಲ್ಲಿ ಬಂಗಾಳ ತಂಡ ಅಭಿಷೇಕ್ ರಾಮನ್ ಅವರ ಔಟಾಗದೆ 122 ರನ್(108 ಎಸೆತ, 11 ಬೌಂಡರಿ)ನೆರವಿನಿಂದ ರಾಜಸ್ಥಾನ ವಿರುದ್ಧ 5 ವಿಕೆಟ್‌ಗಳ ಸುಲಭ ಜಯ ದಾಖಲಿಸಿತು. ಗೆಲುವು ದಾಖಲಿಸಿದ ಗುಜರಾತ್, ಜಮ್ಮು-ಕಾಶ್ಮೀರ ಹಾಗೂ ಬಂಗಾಳ ತಲಾ 4 ಅಂಕ ಗಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News