ಜ್ಯವೆಲ್ಲರಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಅಪಹರಣ

Update: 2019-10-04 19:01 GMT

ಶಿವಮೊಗ್ಗ, ಅ. 4: ಆಭರಣ ಖರೀದಿ ಸೋಗಿನಲ್ಲಿ ಅಂಗಡಿಗೆ ಆಗಮಿಸಿದ ಇಬ್ಬರು ಮಹಿಳೆಯರು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಅಪಹರಿಸಿ ಪರಾರಿಯಾಗಿರುವ ಘಟನೆ ನಗರದ ಬಾಲರಾಜ ಅರಸ್ ರಸ್ತೆಯ ಮೈತ್ರಿ ಜ್ಯುವೆಲರ್ಸ್‍ನಲ್ಲಿ ನಡೆದಿದೆ. 

33 ಗ್ರಾಂ ತೂಕದ, ಅಂದಾಜು 1 ಲಕ್ಷ ರೂ. ಮೌಲ್ಯದ ಕಿವಿ ಓಲೆಗಳನ್ನು ಮಹಿಳೆಯರು ಅಪಹರಿಸಿದ್ದಾರೆ. ಕಳವು ಕೃತ್ಯವು ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಆಪಾದಿತ ಮಹಿಳೆಯರಿಬ್ಬರು ಈ ಅಂಗಡಿಗೆ ಆಗಮಿಸುವುದಕ್ಕೂ ಮುನ್ನ, ಸಮೀಪದ ಮತ್ತೊಂದು ಚಿನ್ನಾಭರಣ ಅಂಗಡಿಗೂ ತೆರಳಿದ್ದರು. ಆದರೆ ಅಲ್ಲಿ ಕಳವು ಮಾಡಲು ಸಾಧ್ಯವಾಗದೆ, ಈ ಅಂಗಡಿಗೆ ಆಗಮಿಸಿದ್ದರು ಎಂದು ಹೇಳಲಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News