ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-10-05 06:05 GMT

ವಿದ್ಯಾರ್ಥಿವೇತನ

(ಆದಾಯ ಆಧಾರಿತ): ಎಐಸಿಟಿಇ- ಸಕ್ಷಮ್ ಸ್ಕಾಲರ್‌ಶಿಪ್ ಸ್ಕೀಂ 2019-20

ವಿವರ: ಭಾರತದಲ್ಲಿ ಮಾನ್ಯತೆ ಪಡೆದ ಸಂಸ್ಥೆಗಳಿಂದ ತಾಂತ್ರಿಕ/ ಡಿಪ್ಲೊಮಾ ಪದವಿ ಪಡೆಯಲು ಆಸಕ್ತಿ ಹೊಂದಿರುವ ವಿಶಿಷ್ಟ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಎಐಸಿಟಿಇ ಆರ್ಥಿಕ ಸಹಾಯ ನೀಡುತ್ತದೆ. ವೃತ್ತಿಪರ ಕೋರ್ಸ್ ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶವಿದೆ.

ಅರ್ಹತೆ: ಅಂಗವೈಕಲ್ಯ ಮಟ್ಟ ಶೇ.40ಕ್ಕಿಂತ ಹೆಚ್ಚಿಗಿರುವ ಎಲ್ಲಾ ವಿಶಿಷ್ಟ ಸಾಮರ್ಥ್ಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಎಐಸಿಟಿಯ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಯಾವುದೇ ಡಿಗ್ರಿ/ಡಿಪ್ಲೊಮಾ ಕೋರ್ಸ್ ನ ಪ್ರಥಮ ವರ್ಷಕ್ಕೆ ನೋಂದಣಿ ಮಾಡಿಕೊಂಡಿರಬೇಕು. ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರಬೇಕು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ 30,000 ರೂ.ವರೆಗಿನ ಬೋಧನಾ ಶುಲ್ಕದ ಮರುಪಾವತಿ ಅಥವಾ ವಾಸ್ತವಿಕ ಬೋಧನಾ ಶುಲ್ಕ - ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಲಾಗುವುದು. ಜೊತೆಗೆ, ಪ್ರಾಸಂಗಿಕ ಶುಲ್ಕವಾಗಿ ವರ್ಷಕ್ಕೆ 10 ತಿಂಗಳು, ತಿಂಳಿಗೆ 2000 ರೂ. ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 8, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/AAS4

**********************************************

ವಿದ್ಯಾರ್ಥಿವೇತನ

(ಆದಾಯ ಆಧಾರಿತ): ಎಐಸಿಟಿಇ- ಬಾಲಕಿಯರಿಗೆ ಪ್ರಗತಿ ಸ್ಕಾಲರ್‌ಶಿಪ್ 2019-20

ವಿವರ: ತಾತ್ರಿಕ ಮತ್ತು ವೃತ್ತಿಪರ ವಿಷಯದಲ್ಲಿ ಉನ್ನತ ಅಧ್ಯಯನ ನಡೆಸಲು ಬಾಲಕಿಯರನ್ನು ಪ್ರೋತ್ಸಾಹಿಸಿ ಆರ್ಥಿಕ ನೆರವು ನೀಡುವ ಎಐಸಿಟಿಇಯ ಸ್ಕಾಲರ್‌ಶಿಪ್ ಇದಾಗಿದೆ.

ಅರ್ಹತೆ: ಎಐಸಿಟಿಇಯಿಂದ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಲ್ಲಿ ಪ್ರಥಮ ವರ್ಷದ ಪದವಿ/ಡಿಪ್ಲೊಮಾ ಕೋರ್ಸ್ ಗೆ ನೋಂದಣಿಯಾಗಿರುವ ಭಾರತದ ಬಾಲಕಿಯರು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರಬೇಕು.

ನೆರವು: ಆಯ್ಕೆಯಾದ ವಿದ್ಯಾರ್ಥಿನಿಯರಿಗೆ 30,000 ರೂ.ವರೆಗಿನ ಬೋಧನಾ ಶುಲ್ಕದ ಮರುಪಾವತಿ, ಅಥವಾ ವಾಸ್ತವಿಕ ಬೋಧನಾ ಶುಲ್ಕ - ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಲಾಗುವುದು. ಜೊತೆಗೆ, ಪ್ರಾಸಂಗಿಕ ಶುಲ್ಕವಾಗಿ ವರ್ಷಕ್ಕೆ 10 ತಿಂಗಳು, ತಿಂಗಳಿಗೆ 2000 ರೂ. ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 8, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಜಾಲತಾಣ: http://www.b4s.in/bharati/PSG2

**********************************************

ವಿದ್ಯಾರ್ಥಿವೇತನ

(ಅರ್ಹತೆ ಮತ್ತು ಆದಾಯ ಆಧಾರಿತ): ಮೆರ್ಕ್ ಇಂಡಿಯಾ ಚಾರಿಟೇಬಲ್ ಟ್ರಸ್ಟ್ (ಎಂಐಸಿಟಿ)ಸ್ಕಾಲರ್‌ಶಿಪ್ 2019-20

ವಿವರ: ಬೆಂಗಳೂರು, ಮುಂಬೈ, ನವಿ ಮುಂಬೈ ಮತ್ತು ಥಾಣೆಯ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನಕ್ಕೆ ನೆರವಾಗುವ ಉದ್ದೇಶದಿಂದ ಮೆರ್ಕ್ ಇಂಡಿಯಾ ನೀಡುವ ಸ್ಕಾಲರ್‌ಶಿಪ್. ಅರ್ಹ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪೂರೈಸುವವರಿಗೆ ಸ್ಕಾಲರ್‌ಶಿಪ್ ನೆರವು ಒದಗಿಸಲಾಗುವುದು.

ಅರ್ಹತೆ: ಬೆಂಗಳೂರು, ಥಾಣೆ, ನವಿ ಮುಂಬೈ ಹಾಗೂ ಮುಂಬೈಯ ವಿದ್ಯಾರ್ಥಿಗಳು, 2018-19ರ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಕನಿಷ್ಠ ಶೇ.80 ಅಂಕ ಗಳಿಸಿರಬೇಕು. ಕುಟುಂಬದ ವಾರ್ಷಿಕ ವರಮಾನ ಎಲ್ಲಾ ಮೂಲಗಳಿಂದ ಸೇರಿ 2,40,000 ರೂ.ಗಿಂತ ಕಡಿಮೆ ಇರಬೇಕು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಪದವಿ ಕೋರ್ಸ್ ಮುಗಿಯುವವರೆಗೆ ವಾರ್ಷಿಕ 500 ರಿಂದ 1250 ಗ್ರೇಟ್ ಬ್ರಿಟನ್ ಪೌಂಡ್ ಮೊತ್ತವನ್ನು ನೀಡಲಾಗುವುದು..

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 15, 2019

ಅರ್ಜಿ: ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಜಾಲತಾಣ: http://www.b4s.in/bharati/MIC9

**********************************************

ವಿದ್ಯಾರ್ಥಿವೇತನ

(ಪ್ರತಿಭೆ ಆಧಾರಿತ): ಯುನಿವರ್ಸಿಟಿ ಆಫ್ ಸಸೆಕ್ಸ್ ಸ್ಪೋರ್ಟ್ಸ್ ಸ್ಕಾಲರ್‌ಶಿಪ್ ಸ್ಕೀಂ 2019

ವಿವರ: ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ಭಾರತೀಯ ಕ್ರೀಡಾಪಟುಗಳಿಂದ ಸ್ಕಾಲರ್‌ಶಿಪ್ ಪಡೆದು ಪದವಿ ಅಧ್ಯಯನ ನಡೆಸಲು ಸಸೆಕ್ಸ್ ವಿವಿ ಅರ್ಜಿ ಆಹ್ವಾನಿಸುತ್ತಿದೆ. ಭಾರತೀಯ ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಹಾಯ ಮಾಡಲಾಗುತ್ತದೆ.

ಅರ್ಹತೆ: ಭಾರತದಲ್ಲಿ ಕ್ರೀಡೆಯಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ , ಸಸೆಕ್ಸ್ ವಿವಿಯಲ್ಲಿ ಪದವಿ ಅಧ್ಯಯನಕ್ಕೆ ಸೇರ್ಪಡೆ ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಟ್ಟು 12,000 ರೂ.ಯನ್ನು ತಿಂಗಳ ಕಂತಿನಲ್ಲಿ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 11, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/SSS2

**********************************************

ಕೃಪೆ: www.buddy4study.com

ಫೋ: 08448709545, 08257484563

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News