ಅರಮನೆಯಲ್ಲಿ ನಡೆದ ವಜ್ರಮುಷ್ಠಿ ಕಾಳಗ: 20 ಸೆಕೆಂಡಿನಲ್ಲಿ ಚಿಮ್ಮಿದ ರಕ್ತ

Update: 2019-10-08 15:27 GMT

ಮೈಸೂರು,ಅ.8: ವಿಜಯ ದಶಮಿ ಹಿನ್ನಲೆಯಲ್ಲಿ ಇಂದು ಅರಮನೆಯಲ್ಲಿ ವಜ್ರ ಮುಷ್ಠಿ ಕಾಳಗ ನಡೆದಿದ್ದು,  ಈ ಬಾರಿ ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ ಅವರ ಮಗ ಬಲರಾಮ ಜಟ್ಟಿ, ಚನ್ನಪಟ್ಟಣದ ಉಸ್ತಾದ್ ಪುರುಷೋತ್ತಮ್ ಜಟ್ಟಿ ಶಿಷ್ಯ ನರಸಿಂಹ ಜಟ್ಟಿ ನಡುವೆ ಹಾಗೂ ಚಾಮರಾಜನಗರದ ಉಸ್ತಾದ್ ಬಂಗಾರ ಜಟ್ಟಿ ಶಿಷ್ಯ ಗಿರೀಶ್ ಜೆಟ್ಟಿ ಮತ್ತು ಬೆಂಗಳೂರಿನ ಉಸ್ತಾದ್ ಕೃಷ್ಣ ಜೆಟ್ಟಿ ಶಿಷ್ಯ ನಾರಾಯಣ ಜಟ್ಟಿ ಅಖಾಡದಲ್ಲಿ ಕಾದಾಡಿದರು.

ಆ ಪೈಕಿ ಬಲರಾಮ ಜಟ್ಟಿ ಮತ್ತು ನರಸಿಂಹ ಜಟ್ಟಿಯ ನಡುವಿನ ಕಾಳಗ ರೋಮಾಂಚಕಾರಿಯಾಗಿತ್ತು. ಬಲರಾಮ ಜಟ್ಟಿ ಛಂಗನೆ ಎಗರಿ ಮಿಂಚಿನ ವೇಗದಲ್ಲಿ ಎದುರಾಳಿ ನರಸಿಂಹ ಜಟ್ಟಿ ತಲೆಭಾಗಕ್ಕೆ ವಜ್ರನಖದಿಂದ ಹೊಡೆದು 20 ಸೆಕೆಂಡಿನಲ್ಲೇ ರಕ್ತ ಚಿಮ್ಮಿಸಿದರು. ಬಲರಾಮ ಜಟ್ಟಿ ಮತ್ತು ನರಸಿಂಹ ಜಟ್ಟಿಯ ನಡುವಿನ ಕಾಳಗದಲ್ಲಿ ರಕ್ತ ಚಿಮ್ಮಿದ ಕಾರಣ ಶುಭಸೂಚಕ ಎಂಬಂತೆ ಅಲ್ಲಿಗೆ ಕಾಳಗಕ್ಕೆ ಮಂಗಳ ಹಾಡಲಾಯಿತು.

ದಶಮಂದಿಗಳಾಗಿ ಮೈಸೂರಿನ ಉಸ್ತಾದ್ ಟೈಗರ್ ಬಾಲಾಜಿ ಜಟ್ಟಿ ಮತ್ತು ಶ್ರಿನಿವಾಸ್ ಜಟ್ಟಿ ಇದ್ದರು. ತ್ರಿಷಿಕಾ ಕುಮಾರಿ ಒಡೆಯರ್ ಸೇರಿದಂತೆ ರಾಜವಂಸ್ಥರು ಕಾಳಗ ವೀಕ್ಷಿಸಿದರು. ನಂತರ ರಾಜವಂಶಸ್ಥ ಯದುವೀರ ಅವರು ಬನ್ನಿಮರಕ್ಕೆ ವಿಧಿವತ್ತಾಗಿ ಪೂಜೆ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News