ಆರ್ಥಿಕತೆಯಲ್ಲಿ ಪೂರ್ಣ ಯಾಂತ್ರೀಕರಣ ಬೇಡ: ಪ್ರಸನ್ನ ನೇತೃತ್ವದಲ್ಲಿ ಸತ್ಯಾಗ್ರಹ; ಪ್ರಧಾನಿಗೆ ಪತ್ರ

Update: 2019-10-08 15:44 GMT

ಬೆಂಗಳೂರು: ಪವಿತ್ರ ಆರ್ಥಿಕತೆಗಾಗಿ ರಂಗಕರ್ಮಿ ಪ್ರಸನ್ನ ಅವರು ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಆರ್ಥಿಕತೆಯಲ್ಲಿ ಪೂರ್ಣ ಯಾಂತ್ರೀಕರಣ ಬೇಡ ಎಂದು ಕೆಲವು ಬೇಡಿಕೆಗಳನ್ನು ಮುಂಡಿಟ್ಟು ಪ್ರಸನ್ನ ಅವರ ನೇತೃತ್ವದಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಅವರು ಪತ್ರದಲ್ಲಿ ಉಲ್ಲೇಖಿಸಿದ ಬೇಡಿಕೆಗಳು ಈ ಕೆಳಗಿವೆ:

ಪವಿತ್ರ ಆರ್ಥಿಕತೆಗಾಗಿ ಸತ್ಯಾಗ್ರಹ

ಬೇಡಿಕೆಗಳು

ಪವಿತ್ರ ಆರ್ಥಿಕ  ಕ್ಷೇತ್ರಕ್ಕೆ ಶೂನ್ಯ ತೆರಿಗೆ ವಿಧಿಸಿ, ರಿಫೈನಾನ್ ಸ್ ಮಾಡಿ ಹಾಗೂ ಕ್ಷೇತ್ರದ ಸುಧಾರತೆಯನ್ನು ಸಮರೋಪಾದಿಯಲ್ಲಿ ಜಾರಿಗೆ ತನ್ನಿ

ವರದಿ:

ಗ್ರಾಮ ಸೇವಾ ಸಂಘವು ನೇಮಿಸಿರುವ ತಙ್ಙರ ಸಮಿತಿಯನ್ನು ಅದ್ಯಕ್ಷನಾಗಿ ನಾನು ಈ ಬೇಡಿಕೆಗಳನ್ನು ಸಾರ್ವಜನಿಕರ ಮುಂದೆ ಮಂಡಿಸುತ್ತಿದ್ದೇನೆ. ಗ್ರಾಮ ಸೇವಾ ಸಂಘದ ಭಾಗವಾದ ವಿವಿಧ ರಚನಾತ್ಮಕ ಸಂಘಟನೆಗಳು ಸಾಕಷ್ಟು  ವಿಚಾರ ವಿನಿಮಯದ ನಂತರ ಬೇಡಿಕೆಯನ್ನು ರೂಪಿಸಿರುತ್ತಾರೆ . ಈ ಬೇಡಿಕೆಯಲ್ಲಿ ಬಳಸಲಾಗಿರುವ ಪರಿಕಲ್ಪನೆಗಳಾದ ಪವಿತ್ರ ಆರ್ಥಿಕತೆ ಹಾಗೂ ರಾಕ್ಷಸ ಆರ್ಥಿಕತೆಗಳ ವೈಜ್ಞಾನಿಕ ನಿರೂಪಣೆ ಮಾಡುವಂತೆ ಹಾಗೂ ಆರ್ಥಿಕತೆಯ ಪಾವಿತ್ರ್ಯವನ್ನು ಅಳೆಯಬಲ್ಲಂತಹ ಸೂಕ್ತ ಮಾಪನವೂಂದನ್ನು ಸಿದ್ದಗೊಳಿಸುವಂತೆ ನಮ್ಮನ್ನು ಕೇಳಿರುತ್ತಾರೆ ನಾವು ಸಿದ್ದಪಡಿಸಿರುವ ಮಾಪನವನ್ನು ಸಂಘವು ಅನುಮೋದಿಸಿರುತ್ತದೆ.

ಇಂದಿನ ಚಾರಿತ್ರಿಕ ಸಂದರ್ಭದಲ್ಲಿ ಪವಿತ್ರ ಆರ್ಥಿಕತೆಯೆಂಬುದು ಕನಿಷ್ಠ ಅರವತ್ತು ಪ್ರತಿಶತ ಮಾನವಶ್ರಮ ಹಾಗೂ ಗರಿಷ್ಠ ನಲವತ್ತು ಪ್ರತಿಶತ ಸ್ವಯಂಚಾಲಿತ ಯಂತ್ರಬಳಸುವ, ಹಾಗೂ ಕನಿಷ್ಠ ಅರವತ್ತು ಪ್ರತಿಷತ ಸ್ಥಳೀಯ ಸಂಪನ್ಮೂಲ ಹಾಗೂ ಗರಿಷ್ಠ ನಲವತ್ತು ಪ್ರತಿಷತ ಆಯತಗೊಂಡಿರುವ ಸಂಪನ್ಮೂಲ ಬಳಸುವ ಉತ್ಪಾದನಾ ವ್ಯವಸ್ಥೆಯಾಗಿರುತ್ತದೆ. ಸ್ಥಳೀಯತೆಯ ಮಿತಿ ಅಥವಾ ಆಯಾತದ ಮಿತಿಯೆಂಬುದು ಉತ್ಪಾದನಾ ಕೇಂದ್ರದಿಂದ ನೂರು ಕಿಲೋಮೀಟರುಗಳಾಗಿರುತ್ತದೆ. ರಾಕ್ಷಸ ಆರ್ಥಿಕತೆಯೆಂದರೆ, ಈ ಎಲ್ಲಾ ಮಿತಿಗಳನ್ನೂ ಮೀರಿದ ಅಪಾಯಕಾರಿ ವ್ಯವಸ್ಥೆಯಾಗಿರುತ್ತದೆ.

ಪಾವಿತ್ರ್ಯದ ಮಾಪನವು ಸರಳವಾಗಿರುತ್ತದೆ. ಮಾಪನದ ಒಂದು ತುದಿಯಲ್ಲಿ, ಸಂಪೂರ್ಣ ಕೈಉತ್ಪಾದನೆ ಹಾಗೂ ಸ್ಥಳೀಯ ಸಂಪನ್ಮೂಲವಿದ್ದರೆ ಮತ್ತೊಂದು ತುದಿಯಲ್ಲಿ ಸಂಪೂರ್ಣ ರೋಬೋಟೀಕರಣ ಹಾಗೂ ಸಂಪೂರ್ಣ ಆಯತಗೊಂಡ ಕಚ್ಚಾಸಾಮಗ್ರಿಯಿರುತ್ತದೆ. ಸದರಿ ಮಾಪನದ ಅರವತ್ತು ಪ್ರತಿಷತವೆಂಬುದು ಇಂದಿನ ಗೆರೆಯಾಗಿರುತ್ತದೆ, ಈ ಗೆರೆಯು ನಾಳೆ ಮುಂದುವರೆಯುತ್ತಾ ಹೋಗಬೇಕು. ಪವಿತ್ರ ಆರ್ಥಿಕತೆ ಪ್ರಮಾಣ ಏರುತ್ತಾ ಹೋಗಬೇಕು ಎಂದು ನಾವು ಬಯಸುತ್ತೇವೆ.

ಪವಿತ್ರ ಆರ್ಥಿಕತೆಯನ್ನು ಜಾರಿಗೆ ತರುವಲ್ಲಿ ಸರಕಾರ ಪಾತ್ರ ದೊಡ್ಡದು. ನಾವು ಸತ್ಯಾಗ್ರಹಿಗಳು ಪವಿತ್ರ ಆರ್ಥಿಕತೆಯ ಸಾಧನೆಯಲ್ಲಿ ಸರಕಾರಕ್ಕೆ ಸಹಕಾರ ನೀಡಲು ಸಿದ್ದರಿದ್ದೇವೆ. ತೆರಿಗೆ ವ್ಯವಸ್ಥೆ ಅಂತರಾಷ್ರ್ಟಿಯ ಒಪ್ಪಂದಗಳು, ಉದ್ದಿಮೆ, ಕೃಷಿ, ಕುಶಲಕರ್ಮ, ಮಾತೃಭಾಷೆ ಸಂಸ್ಕೃತಿ ಆದಿಯಾಗಿ ಒಟ್ಟಾರೆ ಆರ್ಥಿಕ ರಾಜಕಾರಣದ ಎಲ್ಲಾ ಕ್ಷೇತ್ರಗಳನ್ನು ಪವಿತ್ರವಾಗಿಸುವಲ್ಲಿ ನಾವು ಸರಕಾರಕ್ಕೆ ತಜ್ಙಸಲಹೆ ಹಾಗೂ ಜನರ ಒತ್ತಾಸೆ ಎರಡನ್ನು ಒದಗಿಸಲಿಕ್ಕೆ ಸಿದ್ದರಿದ್ದೇವೆ. ಪವಿತ್ರ ಆರ್ಥಿಕತೆಯಂಬುದು ಒಂದು ಜನಸ್ನೇಹಿಯಾದ ಹಾಗೂ ಪರಿಸರಸ್ನೇಹಿಯಾದ, ಹಾಗೂ ನ್ಯಾಯಯುತಸಮಾಜವನ್ನು ನಿರ್ಮಿಸಬಲ್ಲ ವ್ಯವಸ್ಥೆಯಾಗಿದೆ. ಭಾರತ ದೇಶದ ಸಂವಿಧಾನವು 39ನೇ ಪರಿಚ್ಛೇದದ ಆಶಯವೇ ಸತ್ಯಾಗ್ರಹದ ಆಶಯವೂ ಆಗಿದೆ.

                                                                  ಡಾ|| ವಿನೋದ ವ್ಯಾಸುಲು

ಬೆಂಗಳೂರು, ವಲ್ಲಭ ನಿಕೇತನ ಅಧ್ಯಕ್ಷರು, ತಜ್ಞರ ಸಮಿತಿ

ಗ್ರಾಮ ಸೇವಾ ಸಂಘ

**********************

ಪವಿತ್ರ ಆರ್ಥಿಕಗಾಗಿ ಸತ್ಯಾಗ್ರಹ

ಗ್ರಾಮ ಸೇವಾ ಸಂಘವು ಪವಿತ್ರ ಆರ್ಥಿಕತೆಯನ್ನು ಉಳಿಸಲು ಸತ್ಯಾಗ್ರಹವನ್ನು ಪ್ರಾರಂಭಿಸಲಿದೆ. ಪವಿತ್ರ ಆರ್ಥಿಕತೆಯೆಂದರೆ ಅತ್ಯಂತ ಕಡಿಮೆ ಹೂಡಿಕೆಮಾಡಿ ಅತ್ಯಂತ ಹೆಚ್ಚು ಜನರಿಗೆ ದುಡಿಮೆಯ ಮಾರ್ಗ ತೋರಿಸುವ ಉತ್ಪಾದನಾ ವ್ಯವಸ್ಥೆ. ಕಡಿಮೆ ಹೂಡಿಕೆ ಎಂದಾಗ, ಹಣದ ಕಡಿಮೆ ಹೂಡಿಕೆಯೂ ಹೌದು, ಪ್ರಕೃತಿಯ ಕಡಿಮೆ ಹೂಡಿಕೆಯೂ ಹೌದು. ಇವೆರಡೂ ಕಡಿಮೆ ಇದ್ದಷ್ಟೂ ಒಳ್ಳೆಯದು ಹೌದು. ಪ್ರಕೃತಿಗೂ ಒಳ್ಳೆಯದು ಪುರುಷನಿಗೂ ಒಳ್ಳೆಯದು.

ಸೋಲುತ್ತಿರುವ ರಾಕ್ಷಸ ಆರ್ಥಿಕತೆ

ಇಂದು ಮೇಲುಗೈ ಸಾಧಿಸಿರುವ ಆರ್ಥಿಕತೆ ಪವಿತ್ರ ಆರ್ಥಿಕತೆಗೆ ವಿರುದ್ಧವಾದದ್ದು. ಅದು ರಾಕ್ಷಸ ಆರ್ಥಿಕತೆ, ಹೌದು, ತನ್ನ ಗುಣ ಹಾಗೂ ಗಾತ್ರ ಎರಡರಲ್ಲೂ, ಅದು ರಾಕ್ಷಸಿ. ಅದು ಇಂದು ಸೋಲುತ್ತಿದೆ. ಜೊತೆಗೆ ಸುತ್ತಲಿನ ವಾತಾವರಣವನ್ನು ತನ್ನೆಡೆಗೆ ಮಾತ್ರ ಕರೆದ್ದೊಯ್ಯುತ್ತಿದೆ. ಪವಿತ್ರ ಆರ್ಥಿಕತೆಯನ್ನು ಉಳಿಸಲು ಇದು ಸರಿಯಾದ ಸಮಯ.

ವಿಶ್ವದಾದ್ಯಂತ ಸರಕಾರಗಳು ಜನರ ತೆರಿಗೆ ಹಣದಿಂದ ಈ ರಾಕ್ಷಸನನ್ನು ಬದುಕಿಸಲು ಪ್ರಯತ್ನಿಸುತ್ತಿದ್ದಾರೆ. ಕೃಷಿ ಕ್ಷೇತ್ರ ತೀವ್ರ ಬಿಕ್ಕಟ್ಟಿನಲ್ಲಿರುವಾಗ, ನೇಕಾರರು, ಕುಶಲಕರ್ಮಿಗಳು ತಮ್ಮ ವೃತಿಯನ್ನು ತೊರೆಯುತ್ತಿರುವಾಗ, ಗ್ರಾಮೀಣ ಬಡವರು ಪಟ್ಟಣಗಳಿಗೆ ಜೀವ ಹಿಡಿದಿಡಲು ಗುಳೆಹೊರಡುತ್ತಿರುವಾಗ, ಸರಕಾರಗಳು ರಾಕ್ಷಸನನ್ನು ಉಳಿಸ ಹೊರಟಿವೆ, ಕಾರುಗಳ ಕಾರಖಾನೆಗಳು ಹಾಗೂ ದಿವಾಳಿಯಾದ ಬ್ಯಾಂಕುಗಳನ್ನು ಉಳಿಸ ಹೊರಟಿವೆ, ಹೌದು ದೈತ್ಯ ರಾಕ್ಷಸ ಕ್ಷೇತ್ರಗಳಿಗೆ ಉದಾರವಾಗಿ ರಿಯಾಯಿತಿಗಳನ್ನು ನೀಡುತ್ತಿದೆ.

ಇದಕ್ಕೂ ನಾಚಿಕೆಗೇಡಿನ ಕೆಲಸವೆಂದರೆ, ರಾಕ್ಷಸನನ್ನು ಉಳಿಸಲು ಪಾವಿತ್ಯ್ರತೆಯ ಅರ್ಥವನ್ನೇ ಬದಲುಮಾಡುತ್ತಿರುವುದು. ಹೌದು ಅವರು ಪುರೋಹಿತಶಾಹಿ, ರಾಕ್ಷಸ ಆರ್ಥಿಕತೆ ಹಾಗೂ ರಾಜಕೀಯ ವ್ಯವಸ್ಥೆಯನ್ನು ಒಟ್ಟಿಗೆ ಪಾವಿತ್ಯ್ರವೆಂದು ಮುಂದೊತ್ತುತ್ತಿವೆ. ಇದರ ಅರ್ಥ ಅವರು ಪ್ರತ್ಯೇಕತಾವಾದ, ಜಾತಿ ವ್ಯವಸ್ಥೆ, ಲಿಂಗ ತಾರತಮ್ಯವನ್ನು ಮುಂದೊತ್ತುತ್ತಿವೆ.

ಈ ಸತ್ಯಾಗ್ರಹವು ಜನರನ್ನು ಕೊಳ್ಳುಬಾಕರಾಗದಿರುವಂತೆ ನೈತಿಕ ಒತ್ತಡ ಹೇರಲಿದೆ. ಹಾಗೂ ನಾವು ಹೇಳುತ್ತಿರುವ ಪ್ರಕಾರ ಪವಿತ್ರ ಎಂದು ಕರೆಯಲ್ಪಡುವ ಪದಾರ್ಥಗಳನ್ನು ಬಳಸುವಂತೆ ಉತ್ತೇಜಿಸುತ್ತದೆ. ನಾವೆಲ್ಲ ಇಂದು ಪವಿತ್ರ ಆರ್ಥಿಕತೆಯನ್ನು ಬಲಪಡಿಸಲು, ಸಾರ್ವಜನಿಕ ಸಂಪನ್ಮೂಲಗಳ ಮೇಲೆ ಎಲ್ಲ ಸರಕಾರಗಳು ಹೂಡಿಕೆ ಮಾಡುವಂತೆ ನೈತಿಕ ಒತ್ತಡವನ್ನು ಹೇರಬೇಕಾಗಿದೆ.

ಪಾವಿತ್ರ್ಯತೆ ಎಂಬುದು ನಮ್ಮನ್ನು ಒಡೆಯಬೇಕಾಗಿಲ್ಲ

ಹೌದು, ನಮಗೆ ತಿಳಿದಿದೆ. ಉದಾಹರಣೆಗೆ, ನಾವು ಕೈಉತ್ಪನ್ನಗಳನ್ನು ಯಂತ್ರೋತ್ಪನ್ನದಿಂದ ಬೇರೆ ಮಾಡಬೇಕಿಲ್ಲ. ಪವಿತ್ರ ಆರ್ಥಿಕತೆ ಎನ್ನುವುದು ಆದೇಶವಲ್ಲ, ಅದು ಒಂದು ಅಳತೆಗೋಲು. ಕೈಉತ್ಪನ್ನಗಳು ಅದರ ಮೇಲ್‍ತುದಿಯಲಿದ್ದರೆ, ಅತ್ಯಂತ ಹೆಚ್ಚುಜನರಿಗೆ ಉದ್ಯೋಗನೀಡುವ ಉತ್ಪನ್ನಗಳು ಅದನ್ನು ಹಿಂಬಾಲಿಸುತ್ತವೆ, ಮತ್ತು ಅವು ಪರಿಸರಕ್ಕೆ ಕಡಿಮೆ ಹಾನಿಕಾರಕವು ಆಗಿರುತ್ತವೆ.

ಹೆಚ್ಚು ಅರ್ಥಪೂರ್ಣವಾದದ್ದು ಪವಿತ್ರ ಆರ್ಥಿಕತೆ

ಜಿ.ಡಿ.ಪಿ ನಮ್ಮನ್ನು ಗಾಬರಿಗೊಳಿಸ ಬೇಕಿಲ್ಲ. ಪವಿತ್ರ ಆರ್ಥಿಕತೆ ಕಡಿಮೆ ಲಾಭದಾಯಕವಾಗಿರಬಹುದು, ಮಂದಗತಿಯಲ್ಲಿ ಉತ್ಪಾದಿಸಬಹುದು. ಆದರೆ ಅದರೊಂದಿಗೆ ಬದುಕುವುದು ಹೆಚ್ಚು ಅರ್ಥಪೂರ್ಣ.

ಗ್ರಾಮ ಸೇವಾ ಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News