ರಾಹುಲ್ ಪಲಾಯನ ಕಾಂಗ್ರೆಸ್‌ನ ದೊಡ್ಡ ಸಮಸ್ಯೆ : ಸಲ್ಮಾನ್ ಖುರ್ಷಿದ್

Update: 2019-10-09 05:08 GMT
ಸಲ್ಮಾನ್ ಖುರ್ಷಿದ್

ಹೊಸದಿಲ್ಲಿ: ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ಗಾಂಧಿ ರಾಜೀನಾಮೆ ನೀಡಿದ್ದನ್ನು ಸೋಲಿನಿಂದ ಪಲಾಯನ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ವಾಗ್ದಾಳಿ ನಡೆಸಿದ್ದಾರೆ.

ಇದರಿಂದಾಗಿ ಚುನಾವಣೆಯಲ್ಲಿ ಪಕ್ಷಕ್ಕೆ ಆದ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನಕ್ಕೆ ಅವಕಾಶವಾಗಲಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ಕೈಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಪಕ್ಷದ ಸ್ಥಿತಿಗತಿ ಬಗ್ಗೆ ವಿವರಿಸಿದ ಅವರು, "ಲೋಕಸಭಾ ಚುನಾವಣೆಯಲ್ಲಿ ಏಕೆ ಸೋಲಾಯಿತು ಎನ್ನುವುದನ್ನು ನಾವು ವಾಸ್ತವವಾಗಿ ವಿಶ್ಲೇಷಿಸಲೇ ಇಲ್ಲ. ದೊಡ್ಡ ಸಮಸ್ಯೆಯೆಂದರೆ ನಾಯಕ ಹೊರ ನಡೆದದ್ದು" ಎಂದು ಅಭಿಪ್ರಾಯಪಟ್ಟರು.

"ಸೋಲಿನ ಹೊಣೆಹೊತ್ತು ರಾಹುಲ್‌ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನ ತ್ಯಜಿಸಿದರು. ಆದರೆ ಆ ನಿರ್ಧಾರ ಕೈಗೊಳ್ಳುವಾಗ, ಹುದ್ದೆಯಲ್ಲಿ ಮುಂದುವರಿದು ಸಂಘಟನೆಗೆ ಚಾಲನೆ ನೀಡುವಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮಾಡಿಕೊಂಡ ಮನವಿಗಳನ್ನು ನಿರ್ಲಕ್ಷಿಸಿದರು" ಎಂದು ಅವರು ವಿಶ್ಲೇಷಿಸಿದರು.

ರಾಹುಲ್ ರಾಜೀನಾಮೆಯನ್ನು ಪಲಾಯನವಾದ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಕಟುವಾಗಿ ಟೀಕಿಸಿರುವುದು ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News