ಹನೂರು: ಭಾರೀ ಮಳೆಗೆ ಆಸ್ತಿ ಪಾಸ್ತಿ ನಷ್ಟ; ಅಧಿಕಾರಿಗಳಿಂದ ಪರಿಶೀಲನೆ

Update: 2019-10-09 18:48 GMT

ಹನೂರು: ಹನೂರು ತಾಲ್ಲೂಕಿನ ಬಂಡಳ್ಳಿ ಗ್ರಾಮದಲ್ಲಿ ಸೋಮವಾರ ಸುರಿದ ಧಾರಾಕಾರ ಮಳೆಗೆ ಮನೆ ಕುಸಿದಿರುವ ಬಗ್ಗೆ ದೂರು ಬಂದ  ಹಿನ್ನಲೆ ಹನೂರು ತಹಶೀಲ್ದಾರ್ ನಾಗರಾಜು ತಾಪಂ ಅದ್ಯಕ್ಷ  ರಾಜೇಂದ್ರ, ತಾಪಂ ಸದಸ್ಯ ಜವಾಧ್ ಅಹಮದ್ ತಾಪಂ ಪ್ರಭಾರ ಕಾರ್ಯನಿರ್ವಾಹಕಾಧಿಕಾರಿ ನಿಂಗರಾಜು ಪಿಡಿಒ ರಾಜು ಬುಧವಾರ ಬೆಳಗ್ಗೆ ಬೇಟಿ ನೀಡಿ ಪರಿಶೀಲನೆ ನೆಡೆಸಿದರು. 

ಈ ವೇಳೆ ಗ್ರಾಮದ ಪ್ರಮುಖ ಬಡಾವಣೆಗಳ ಚರಂಡಿ ನೀರು ಸೇರಿ ಅಡ್ಡಹಳ್ಳದ ನೀರಿಗೆ ಒಟ್ಟಾರೇ ಸೇರಿ ಉಕ್ಕಿ ಸಮೀಪದಲ್ಲಿದ್ದ ಶಿವಮಲ್ಲು ಎಂಬುವವರ ಜಮೀನಿಗೆ ನುಗ್ಗಿ ಆತ ಬೆಳದಿದ್ದ ಜೋಳದ ಫಸಲು ಹಾನಿಯಾಗಿ ಹಲವು ರೈತರ ಜಮೀನುಗಳ ಬಾವಿ ಕುಸಿದಿರುವ ಸಂಬಂಧಿಸಿದಂತೆ ಶಿವಮಲ್ಲು ಅಧಿಕಾರಿಗಳ ಬಳಿ ಅಳಲು ತೋಡಿಕೊಂಡನು. ಬಳಿಕ ಅಡ್ಡಹಳ್ಳದಲ್ಲಿ ಯಥೇಚ್ಛವಾಗಿ ನೀರು ಹರಿದಿರುವ ಹಿನ್ನೆಲೆ ಇದರ ಸಮೀಪದಲ್ಲಿರುವ ದಲಿತರ ಸ್ಮಶಾಣದ ಕಾಂಪೌಡ್ ನೆಲಕ್ಕೆ ಉರುಳಿದಿರುವ  ಸಂಬಂಧ ದುರಸ್ಥಿ ಮಾಡಿಸುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದರು. ಹಾಗೂ   ಸುಮಾರು 5ರಿಂದ 6 ಜಮೀನಿನ ಗುಡಿಸಲು ಮನೆಗಳಿಗೆ ಮಳೆ ನೀರು ಸೇರಿ ಚರಂಡಿಯ ಕಲುಷಿತ ನೀರು ನುಗ್ಗಿರುವ ಪರಿಣಾಮ ಧವಸ ಧಾನ್ಯಗಳು ಜೊತೆ ಹಲವು ವಸ್ತುಗಳ ಹಾನಿಯಾಗಿರುವ ಬಗ್ಗೆ ದೂರಿದರು..           

**ಮನೆ ಕುಸಿತ ಶೀಘ್ರದಲ್ಲಿ ಪರಿಹಾರ ಒದಗಿಸುವ ಭರವಸೆ*  : ಬಂಡಳ್ಳಿ ಗ್ರಾಮದ  ನಂಜುಂಡಚಾರಿ ಹಾಗೂ ರಾಜಮ್ಮ ನಿಂಗಶೆಟ್ಟಿ      ಎಂಬುವವರ ಮನೆಯ ಗೋಡೆಯೂ  ಕುಸಿದಿರುವ ಹಿನ್ನಲೆ  ತಹೀಸಿಲ್ದಾರ್ ನಾಗರಾಜು  ಪರಿಶೀಲಿಸಿ ಶೀಘ್ರದಲ್ಲಿಯೇ    ಸರಕಾರದಿಂದ ದೊರೆಯುವ ಪರಿಹಾರ ಒದಗಿಸಲು   ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು ಅಲ್ಲದೇ ತಾಪಂ ರಾಜೇಂದ್ರ ಮಾತನಾಡಿ  ಗ್ರಾಪಂ ಯಿಂದ ವಸತಿ ನಿರ್ಮಿಸಿಕೂಡಲು ಪಿಡಿಒಗೆ ತಾಕೀತು ಮಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News