ಭೋಪಾಲ: ಅತ್ಯಂತ ಹಿರಿಯ ಹೆಣ್ಣುಹುಲಿ ಸಾವು

Update: 2019-10-10 05:20 GMT

ಭೋಪಾಲ, ಅ.10: ಮಧ್ಯಪ್ರದೇಶದ ವನವಿಹಾರ ನ್ಯಾಷನಲ್ ಪಾರ್ಕ್‌ನಲ್ಲಿದ್ದ ಅತ್ಯಂತ ಹಿರಿಯ ಹೆಣ್ಣುಹುಲಿ ಪ್ರಿಯಾ ವಯೋಸಂಬಂಧಿ ಕಾರಣಗಳಿಂದ ಮೃತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಸುಮಾರು ಒಂದು ತಿಂಗಳಿಂದ ತೀವ್ರ ಅಸ್ವಸ್ಥವಾಗಿದ್ದ ಹುಲಿ ಒಂದೆರಡು ದಿನದಿಂದ ಆಹಾರವನ್ನೇ ಸ್ವೀಕರಿಸುತ್ತಿರಲಿಲ್ಲ. ಮಂಗಳವಾರ ಬೆಳಗ್ಗಿನ ಜಾವ ಮೃತಪಟ್ಟಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ನ್ಯಾಷನಲ್ ಪಾರ್ಕ್‌ನ ಪಶುವೈದ್ಯ ಡಾ ಅತುಲ್ ಗುಪ್ತಾ ತಿಳಿಸಿದ್ದಾರೆ. ಜೈಪುರದಲ್ಲಿ ಸರ್ಕಸ್ ಕಂಪೆನಿಯಲ್ಲಿದ್ದ ಪ್ರಿಯಾಳನ್ನು 2006ರಲ್ಲಿ ನ್ಯಾಷನಲ್ ಪಾರ್ಕ್‌ಗೆ ಸೇರಿಸಲಾಗಿತ್ತು.

ಅರಣ್ಯಪ್ರದೇಶದಲ್ಲಿರುವ ಹುಲಿಗಳ ಜೀವಿತಾವಧಿ ಸಾಮಾನ್ಯವಾಗಿ 15-16 ವರ್ಷವಿದ್ದರೆ ರಕ್ಷಿತಾರಣ್ಯದಲ್ಲಿ ಇರುವ ಹುಲಿಗಳು ಸುರಕ್ಷಿತ ಪ್ರದೇಶದಲ್ಲಿ ಇರುವ ಕಾರಣ ಇದಕ್ಕಿಂತ ಹೆಚ್ಚು ಸಮಯ ಬದುಕುತ್ತವೆ. ವನ ವಿಹಾರ ನ್ಯಾಷನಲ್ ಪಾರ್ಕ್‌ನಲ್ಲಿರುವ ಪ್ರಾಣಿಗಳಿಗೆ ಮುಕ್ತವಾಗಿ ಅಡ್ಡಾಡಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News