ಜಮ್ಮು ಮತ್ತು ಕಾಶ್ಮೀರ: ಮೂವರು ರಾಜಕಾರಣಿಗಳ ಬಿಡುಗಡೆ

Update: 2019-10-10 14:29 GMT

ಶ್ರೀನಗರ, ಅ.10: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ, ಆಗಸ್ಟ್ 5ರಿಂದ ಬಂಧನದಲ್ಲಿದ್ದ ಮೂವರು ರಾಜಕಾರಣಿಗಳನ್ನು ಜಮ್ಮು ಮತ್ತು ಕಾಶ್ಮೀರದ ಆಡಳಿತ ಬಿಡುಗಡೆಗೊಳಿಸಿದೆ.

ಯವಾರ್ ಮೀರ್, ಮುಹಮ್ಮದ್ ಮತ್ತು ಶೋಯಬ್ ಲೋನ್‌ರನ್ನು ಗುರುವಾರ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಮೀರ್ ಪಿಡಿಪಿಯ ಮಾಜಿ ಶಾಸಕನಾಗಿದ್ದರೆ , ಲೋಕಸಭಾ ಚುನಾವಣೆಯಲ್ಲಿ ಲೋನ್ ಉತ್ತರ ಕಾಶ್ಮೀರ ಸಂಸದೀಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತ ಬಳಿಕ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನೂರ್ ಮುಹಮ್ಮದ್ ಶ್ರೀನಗರದ ಬಟ್ಮಾಲೂ ಪ್ರದೇಶದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಸಂಘಟನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಶಾಂತಿ ಕಾಪಾಡಲು ಬದ್ಧನಾಗಿದ್ದೇನೆ ಹಾಗೂ ಉತ್ತಮ ವರ್ತನೆ ತೋರುತ್ತೇನೆ ಎಂದು ಮುಚ್ಚಳಿಕೆ ಬರೆದುಕೊಟ್ಟ ಬಳಿಕ ಇವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News