ಕೆಎಸ್ಸಾರ್ಟಿಸಿ ನೌಕರರ ಭತ್ತೆ ಹೆಚ್ಚಳ

Update: 2019-10-10 16:15 GMT

ಬೆಂಗಳೂರು, ಅ.10: ರಾಜ್ಯ ಸರಕಾರದ ಆದೇಶದಂತೆ ಕೆಎಸ್ಸಾರ್ಟಿಸಿ 1 ರಿಂದ 4 ನೇ ದರ್ಜೆ ಅಧಿಕಾರಿ, ನೌಕರರ ಪ್ರವಾಸ, ದಿನ ಭತ್ತೆ ಸೇರಿ ಇತರೆ ಭತ್ತೆ ಹೆಚ್ಚಳ ಮಾಡಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಆದೇಶ ಹೊರಡಿಸಿದ್ದಾರೆ.

ಪ್ರಥಮ ದರ್ಜೆಯ ಹಿರಿಯ ಅಧಿಕಾರಿಗಳು ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಫಸ್ಟ್ ಕ್ಲಾಸ್ ಎಸಿ ಕೋಚ್, ಕಿರಿಯ ಅಧಿಕಾರಿಗಳು 2 ಟಯರ್ ಎಸಿ ಕೋಚ್‌ನಲ್ಲಿ ಪ್ರಯಾಣ ಮಾಡಬಹುದು. 2 ಮತ್ತು 3 ನೇ ದರ್ಜೆಯ ಸಿಬ್ಬಂದಿ 3 ಟಯರ್ ಎಸಿ ಕೋಚ್ ಹಾಗೂ 4 ನೇ ದರ್ಜೆಯ ನೌಕರರು ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಎಸಿ ಚೇರ್ ಕ್ಲಾಸ್ ಹಾಗೂ ಇತರ ರೈಲುಗಳಲ್ಲಿ ಸ್ಲೀಪರ್ ಕ್ಲಾಸ್‌ನಲ್ಲಿ ಪ್ರಯಾಣಿಸಬಹುದಾಗಿದೆ.

ರಾಜ್ಯದ ಒಳಗೆ ಮತ್ತು ಹೊರಗೆ ಪ್ರಯಾಣಿಸಿದಾಗ ತಂಗುವುದಕ್ಕೆ ಸಂಬಂಧಿಸಿದಂತೆ ದಿನಭತ್ತೆ ಹೆಚ್ಚಿಸಲಾಗಿದೆ. ಬೆಂಗಳೂರಿಗೆ 300-600 ರೂ., ಮಹಾನಗರ ಪಾಲಿಕೆಗಳಿಗೆ 300-500 ರೂ., ಇತರ ನಗರಗಳಿಗೆ 200-400 ರೂ.ವರೆಗೆ ನೀಡಲಾಗುವುದು. ದಿಲ್ಲಿ, ಮುಂಬೈ, ಚೆನ್ನೈ, ಹೈದರಾಬಾದ್ ಹಾಗೂ ಕೋಲ್ಕತ್ತಾಗಳಿಗೆ 500 ರೂ. ನಿಂದ 800 ರೂ., ಹಾಗೂ ಇತರ ಸ್ಥಳಗಳಿಗೆ 300 ರಿಂದ 600 ರೂ.ಭತ್ತೆ ನೀಡಲಾಗುತ್ತದೆ. ಹೊರ ರಾಜ್ಯಗಳಲ್ಲಿ ಊಟ ಮತ್ತು ವಸತಿಗಾಗಿ 2-3 ಸಾವಿರ ರೂ.ಗಳನ್ನು ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News