ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-10-11 18:50 GMT

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ಆರ್‌ಪಿಎಫ್/ಆರ್‌ಪಿಎಸ್‌ಎಫ್‌ಗೆ ಪ್ರಧಾನ ಮಂತ್ರಿಯವರ ಸ್ಕಾಲರ್‌ಶಿಪ್ 2019-20

ವಿವರ: ಭಾರತ ಸರಕಾರದ ರೈಲ್ವೆ ಇಲಾಖೆ ಆರ್‌ಪಿಎಫ್/ಆರ್‌ಪಿಎಸ್‌ಎಫ್‌ನ ಮಾಜಿ ಸಿಬ್ಬಂದಿಯ ವಿಧವೆ, ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಪಡೆಯಲು ಪ್ರೋತ್ಸಾಹಿಸಲು ನೀಡುವ ಸ್ಕಾಲರ್‌ಶಿಪ್.

ಅರ್ಹತೆ: ಕನಿಷ್ಠ ಶೇ.60 ಅಂಕದೊಂದಿಗೆ 12ನೇ ತರಗತಿ/ಪದವಿ ತರಗತಿ ಪಾಸಾಗಿರುವ ಆರ್‌ಪಿಎಫ್/ಆರ್‌ಪಿಎಸ್‌ಎಫ್‌ನ ಮಾಜಿ ಯೋಧರ ಮಕ್ಕಳು, ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಗೆ ದಾಖಲಾತಿ ಪಡೆದಿರುವವರು ಅರ್ಹರು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 2,000 ರೂ.(ಪುರುಷರಿಗೆ), ಮಹಿಳೆಯರಿಗೆ ಮಾಸಿಕ 2,500 ರೂ. ನೀಡಲಾಗುವುದು.

 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/PMS5

************************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ವಿವಿ ರ್ಯಾಂಕ್ ವಿಜೇತರಿಗೆ ಸ್ನಾತಕೋತ್ತರ ಸ್ಕಾಲರ್‌ಶಿಪ್ 2019-20

ವಿವರ: ಮಾನ್ಯತೆ ಪಡೆದ ವಿವಿಯಲ್ಲಿ ಉನ್ನತ ಶಿಕ್ಷಣ ಪಡೆಯುವಾಗ ರ್ಯಾಂಕ್ ಪಡೆದವರಿಂದ ಅರ್ಜಿಯನ್ನು ಯುಜಿಸಿ ಆಹ್ವಾನಿಸಿದೆ.

ಅರ್ಹತೆ: ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿ ತರಗತಿಗೆ ದಾಖಲಾದವರು, ಈ ಹಿಂದಿನ ಪದವಿ ಪರೀಕ್ಷೆಯಲ್ಲಿ ಪ್ರಥಮ ಅಥವಾ ದ್ವಿತೀಯ ರ್ಯಾಂಕ್ ಗಳಿಸಿದವರು, ಆಯ್ದ ವಿಷಯಗಳಲ್ಲಿ ಕನಿಷ್ಠ ಶೇ.60 ಅಂಕ ಗಳಿಸಿದವರು ಅರ್ಹರು. ಅರ್ಜಿದಾರರ ವಯಸ್ಸು 30 ವರ್ಷದ ಒಳಗಿರಬೇಕು.

ನೆರವು: ಆಯ್ಕೆಯಾದ ಅಭ್ಯರ್ಥಿಗಳು 2 ವರ್ಷದ ಅವಧಿಗೆ ಮಾಸಿಕ 3,100 ರೂ. ಆರ್ಥಿಕ ನೆರವು ಪಡೆಯುತ್ತಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ:  http://www.b4s.in/bharati/PGM3

***********************

ವಿದ್ಯಾರ್ಥಿವೇತನ

(ಆದಾಯ ಆಧಾರಿತ):

ಎಸ್ಟಿ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ನ್ಯಾಷನಲ್ ಫೆಲೋಶಿಪ್ ಮತ್ತು ಸ್ಕಾಲರ್‌ಶಿಪ್ 2019-20

ವಿವರ: ಉನ್ನತ ಶಿಕ್ಷಣ ಪಡೆಯಬಯಸುವ ಎಸ್ಟಿ ಸಮುದಾಯದ ವಿದ್ಯಾರ್ಥಿಗಳಿಂದ ಬುಡಕಟ್ಟು ವ್ಯವಹಾರಗಳ ಇಲಾಖೆ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನಿಸಿದೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಸ್ಕಾಲರ್‌ಶಿಪ್ ಮತ್ತು ಫೆಲೊಶಿಪ್ ಸೌಲಭ್ಯ ಒದಗಿಸುವ ಉದ್ದೇಶವಿದೆ.

 ಅರ್ಹತೆ: ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಂಫಿಲ್/ಪಿಎಚ್‌ಡಿಗೆ ದಾಖಲಾದವರು ಫೆಲೋಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗೆ ದಾಖಲಾತಿ ಪಡೆದವರು, ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ.ಗಿಂತ ಕಡಿವೆು ಇರುವವರು ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಎಂಫಿಲ್/ಪಿಎಚ್‌ಡಿ ವಿದ್ಯಾರ್ಥಿಗಳು 28,000 ರೂ.ವರೆಗಿನ ಮಾಸಿಕ ಫೆಲೊಶಿಪ್, ಮನೆಬಾಡಿಗೆ ಭತ್ತೆ, ಸಾದಿಲ್ವಾರು ನಿಧಿಯಾಗಿ ಮಾಸಿಕ 25,000 ರೂ. ಅ, ತಿಂಗಳಿಗೆ 2,000 ರೂ. ಬೆಂಗಾವಲು ಭತ್ತೆ ಪಡೆಯುತ್ತಾರೆ.

  ಪದವಿ/ಸ್ನಾತಕೋತ್ತರ ವಿಭಾಗದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 2.5 ಲಕ್ಷದವರೆಗಿನ ಬೋಧನಾ ಶುಲ್ಕ, ಪುಸ್ತಕ, ಕಂಪ್ಯೂಟರ್ ಹಾಗೂ ಜೀವನ ವೆಚ್ಚವಾಗಿ 74,400 ರೂ.ವರೆಗೆ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ:  http://www.b4s.in/bharati/NFA2

*********************

ವಿದ್ಯಾರ್ಥಿವೇತನ

(ಆದಾಯ ಆಧಾರಿತ):

ಟಾಪ್‌ಕ್ಲಾಸ್ ಎಜುಕೇಶನ್ ಸ್ಕೀಂ ಫಾರ್ ಎಸ್‌ಸಿ ಸ್ಟೂಡೆಂಟ್ಸ್ 2019-20

ವಿವರ: ಉನ್ನತ ಶಿಕ್ಷಣ ಪಡೆಯಬಯಸುವ ಎಸ್ಸಿ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ದ ವಿದ್ಯಾರ್ಥಿಗಳಿಗೆ ಒಟ್ಟು 1,500 ಸ್ಕಾಲರ್‌ಶಿಪ್ ನೀಡಲಾಗುವುದು.

ಅರ್ಹತೆ: ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂ.ಗಿಂತ ಕಡಿಮೆ ಇರುವ, 12ನೇ ತರಗತಿ ತೇರ್ಗಡೆಯಾಗಿರುವ ಎಸ್ಸಿ ಸಮುದಾಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಪೂರ್ಣಾವಧಿಯ ಪದವಿ/ಸ್ನಾತಕೋತ್ತರ ಪದವಿಗೆ ದಾಖಲಾಗಿರಬೇಕು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ 3.75 ಲಕ್ಷ ರೂ.ವರೆಗೆ ಸ್ಕಾಲರ್‌ಶಿಪ್ ನೀಡಲಾಗುವುದು. ಜೊತೆಗೆ ಜೀವನವೆಚ್ಚವಾಗಿ ತಿಂಗಳಿಗೆ 2,200 ರೂ. ಪುಸ್ತಕ ಮತ್ತು ಇತರ ವೆಚ್ಚಕ್ಕೆ ವಾರ್ಷಿಕ 3,000 ರೂ., ಕಂಪ್ಯೂಟರ್ ಹಾಗೂ ಸಂಬಂಧಿತ ವೆಚ್ಚಕ್ಕೆ ಒಂದು ಬಾರಿ 45,000 ರೂ. ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/TCE8

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News