ದ್ವಿತೀಯ ಟೆಸ್ಟ್: ದಕ್ಷಿಣ ಆಫ್ರಿಕಾ ಆಲೌಟ್, ಭಾರತಕ್ಕೆ ಭಾರೀ ಮುನ್ನಡೆ

Update: 2019-10-12 11:21 GMT

 ಪುಣೆ, ಅ.12:ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತದ ಬೃಹತ್ ಮೊತ್ತಕ್ಕೆ ಉತ್ತರಿಸಹೊರಟ ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್‌ನಲ್ಲಿ 275ರನ್‌ಗೆ ಸರ್ವಪತನ ಕಂಡಿದೆ.

 ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 601 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದ್ದ ಭಾರತ ತಂಡ ಹರಿಣ ಪಡೆಯನ್ನು ಬೇಗನೆ ಕಟ್ಟಿಹಾಕಿ 326 ರನ್ ಮುನ್ನಡೆ ಪಡೆದಿದೆ.

53 ರನ್‌ಗೆ ಅಗ್ರ ಐವರು ದಾಂಡಿಗರನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿದ್ದ ಆಫ್ರಿಕದ ಪರ ಬಾಲಂಗೋಚಿ ಕೇಶವ ಮಹಾರಾಜ್ ಅಗ್ರ ಸ್ಕೋರರ್(72, 132 ಎಸೆತ, 12 ಬೌಂಡರಿ)ಎನಿಸಿಕೊಂಡರು. ನಾಯಕ ಎಫ್‌ಡು ಪ್ಲೆಸಿಸ್ 64 ರನ್ ಗಳಿಸಿದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ಆರ್.ಅಶ್ವಿನ್ 69 ರನ್‌ಗೆ 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಉಮೇಶ್ ಯಾದವ್(3-37) ಹಾಗೂ ಮುಹಮ್ಮದ್ ಶಮಿ(2-44)ಐದು ವಿಕೆಟ್ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News