ಸಾಮಾಜಿಕ ಜಾಲತಾಣ ಖಾತೆಗಳಿಗೆ ಆಧಾರ್ ಸಂಖ್ಯೆ ಲಿಂಕ್: ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2019-10-14 08:21 GMT

ಹೊಸದಿಲ್ಲಿ, ಅ.14: ಆಧಾರ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣ ಖಾತೆಗಳ ಜತೆ ಜೋಡಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿ ಮದ್ರಾಸ್ ಹೈಕೋರ್ಟಿಗೆ ಅಪೀಲು ಸಲ್ಲಿಸುವಂತೆ ಅರ್ಜಿದಾರನಿಗೆ ಸೂಚಿಸಿದೆ.

"ಎಲ್ಲವೂ ಸುಪ್ರೀಂ ಕೋರ್ಟ್ ಮುಂದೆ ಬರಬೇಕಿಲ್ಲ. ಈ ವಿಚಾರ ಮದ್ರಾಸ್ ಹೈಕೋರ್ಟಿನ ಮುಂದಿದೆ, ನೀವು ಅಲ್ಲಿಗೆ ಹೋಗಿ'' ಎಂದು ವಕೀಲ ಅಶ್ವಿನಿ ಉಪಾಧ್ಯಾಯ ಅವರ ಪಿಐಎಲ್‍ ಗೆ ಪ್ರತಿಕ್ರಿಯಿಸಿದ ನ್ಯಾಯಾಲಯ ಹೇಳಿದೆ.

ಸಾಮಾಜಿಕ ಜಾಲತಾಣ ಖಾತೆಗಳ ಜತೆಗೆ ಆಧಾರ್ ಜೋಡಿಸಬೇಕೆಂದು ಕೋರಿ  ಸಲ್ಲಿಸಲಾದ ಎರಡು ಅಪೀಲುಗಳು ಮದ್ರಾಸ್ ಹೈಕೋರ್ಟಿನಲ್ಲಿ ವಿಚಾರಣಾ ಹಂತದಲ್ಲಿದೆ. ಇಂತಹುದೇ ಅಪೀಲುಗಳನ್ನು ಬಾಂಬೆ ಹಾಗೂ ಮದ್ರಾಸ್ ಹೈಕೋರ್ಟ್ ಗಳ ಮುಂದೆ ಕೂಡ ಇದೆ.

ವಿವಿಧ ಹೈಕೋರ್ಟ್‍ಗಳಲ್ಲಿ ಈ ಕುರಿತು ಇರುವ ಅಪೀಲುಗಳನ್ನು ಸುಪ್ರೀಂ ಕೋರ್ಟ್‍ಗೆ ವರ್ಗಾಯಿಸಬೇಕೆಂದು ಫೇಸ್ ಬುಕ್ ಕೂಡ ಈ ಹಿಂದೆ ಅಪೀಲು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News