ಅರಣ್ಯ ಇಲಾಖೆ: ವೇತನ ಸಿಗದೇ ಸಂಕಷ್ಟದಲ್ಲಿರುವ ಚಾಲಕರು

Update: 2019-10-15 18:49 GMT

ಬೆಂಗಳೂರು, ಅ.15: ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಚಾಲಕರಿಗೆ ಕಳೆದ ಮೂರು ತಿಂಗಳಿನಿಂದ ವೇತನ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಡಿಎಫ್‌ಒ, ಸಿಎಫ್‌ಒ, ಸಿಸಿಎಫ್ ಹಾಗೂ ಎಪಿಸಿಸಿಎಫ್ ಅಧಿಕಾರಿಗಳು ಬಳಸುವ 1300 ವಾಹನಗಳಲ್ಲಿ 80 ಖಾಯಂ ಚಾಲಕರಿದ್ದು, ಉಳಿದ ಎಲ್ಲರೂ ಗುತ್ತಿಗೆ ಚಾಲಕರಾಗಿದ್ದಾರೆ. ಖಾಯಂ ನೌಕರರು ಪಡೆಯುವ ಕನಿಷ್ಠ ವೇತನ ಶ್ರೇಣಿಗೆ ತಾತ್ಕಾಲಿಕ ನೌಕರರು ಅರ್ಹರು ಎಂದು ಸರಕಾರದ ಆದೇಶವಿದ್ದರೂ, ಅದು ಈ ಚಾಲಕರ ಪಾಲಿಗೆ ಮರೀಚಿಕೆಯಾಗಿದೆ.

ಸೇವಾ ಮತ್ತು ವಿಮಾ ಭದ್ರತೆಯೂ ಈ ಚಾಲಕರಿಗೆ ಇಲ್ಲದಾಗಿದೆ. ಹತ್ತು-ಹನ್ನೆರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಾವಿರಾರು ಚಾಲಕರಿಗೆ ಯಾವುದೇ ಸರಕಾರಿ ಸೌಲಭ್ಯವಿಲ್ಲ. ವಾಹನ ಚಾಲಕರಿಗೆ ಮಾಸಿಕ 15 ಸಾವಿರ ರೂ.ಗಳಷ್ಟು ವೇತನವಿದೆ. ಆದರೆ, ಗುತ್ತಿಗೆದಾರರು ಕೆಲವರಿಗೆ 10 ಸಾವಿರ, ಮತ್ತೆ ಕೆಲವರಿಗೆ 8 ಸಾವಿರ ನೀಡುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ. ಇದರ ನಡುವೆಯೇ, ಕಳೆದ ಮೂರು ತಿಂಗಳಿನಿಂದ ಗುತ್ತಿಗೆದಾರರು ವೇತನ ಪಾವತಿಸಿಲ್ಲ.

ಅ.21ಕ್ಕೆ ಮುಷ್ಕರ: ಪ್ರಮುಖವಾಗಿ ವೇತನ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಅರಣ್ಯ ಇಲಾಖಾ ದಿನಗೂಲಿ ಹಾಗೂ ಕ್ಷೇಮಾಭಿವೃದ್ಧಿ ನೌಕರರ ಸಂಘದ ವತಿಯಿಂದ ಅ.21ಕ್ಕೆ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News