ಅಯೋಧ್ಯೆ ಭೂ ವಿವಾದ ದೈನಂದಿನ ವಿಚಾರಣೆ ಇಂದು ಸಂಜೆಗೆ ಅಂತ್ಯ: ಸಿಜೆಐ ಗೊಗೊಯ್

Update: 2019-10-16 06:48 GMT

ಹೊಸದಿಲ್ಲಿ, ಅ.16: ಅಯೋಧ್ಯೆಯಲ್ಲಿ ರಾಜಕೀಯವಾಗಿ ಸೂಕ್ಷ್ಮವಾಗಿರುವ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದಲ್ಲಿ ದೈನಂದಿನ ವಿಚಾರಣೆ ಇಂದು ಸಂಜೆ 5:00 ಗಂಟೆಗೆ ಕೊನೆಗೊಳ್ಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಬುಧವಾರ ಹೇಳಿದ್ದಾರೆ.

ವಾದ ಮಂಡಿಸಲು ಇನ್ನಷ್ಟು ಸಮಯ ನೀಡಬೇಕೆಂದು ಸುಪ್ರೀಂಕೋರ್ಟ್‌ಗೆ ವಕೀಲರೊಬ್ಬರು ಮನವಿ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ‘‘ನಾವು ಸಂಜೆ 5:00 ಗಂಟೆಗೆ ವಿಚಾರಣೆ ಮುಗಿಸುತ್ತೇವೆ. ವಿಚಾರಣೆ ಜಾಸ್ತಿಯಾಯಿತು’’ ಎಂದರು.

ಮುಖ್ಯ ನ್ಯಾಯಮೂರ್ತಿ ಗೊಗೊಯ್ ನ.17ರಂದು ತಮ್ಮ ಪದವಿಯನ್ನು ಬಿಟ್ಟುಹೋಗುವ ಮೊದಲು 134 ವರ್ಷ ಹಳೆಯ ಅಯೋಧ್ಯೆ ವಿವಾದದ ಕುರಿತು ನ್ಯಾಯಾಲಯ ತೀರ್ಪು ಘೋಷಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News