73 ಕೋಟಿ ರೂ. ಮೌಲ್ಯದ ನೀರು ಕಳವು ಆರೋಪ: 6 ಮಂದಿಯ ವಿರುದ್ಧ ಪ್ರಕರಣ ದಾಖಲು

Update: 2019-10-17 07:19 GMT

ಮುಂಬೈ : ದಕ್ಷಿಣ ಮುಂಬೈನ ಕಲ್ಬದೇವಿ ಪ್ರದೇಶದಲ್ಲಿ ಎರಡು ಅಕ್ರಮ ಬಾವಿಗಳ ಮೂಲಕ ಕಳೆದ ಹನ್ನೊಂದು ವರ್ಷಗಳಿಂದ 73.18 ಕೋಟಿ ರೂ. ಮೌಲ್ಯದ ಅಂತರ್ಜಲವನ್ನು ಕಳವುಗೈದ ಆರೋಪದಲ್ಲಿ ಆರು ಮಂದಿಯ ವಿರುದ್ಧ ನಗರದ ಆಝಾದ್ ಮೈದಾನ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಪಾಂಡ್ಯ ಮ್ಯಾನ್ಶನ್ ನಲ್ಲಿ ಬಾಡಿಗೆದಾರರಾಗಿರುವ ಸುರೇಶ್ ಕುಮಾರ್ ಧೋಕಾ ಎಂಬವರು ನೀಡಿದ ದೂರಿನಂತೆ ಈ ಪ್ರಕರಣ ದಾಖಲಾಗಿದೆ.

ಪಾಂಡ್ಯ ಮ್ಯಾನ್ಶನ್ ಕಂಪೌಂಡ್ ನಲ್ಲಿ ತ್ರಿಪುರ ಪ್ರಸಾದ್ ಪಾಂಡ್ಯ ಈ ಎರಡು ಅಕ್ರಮ ಬಾವಿಗಳನ್ನು ತೋಡಿ ಅದರ ನೀರನ್ನು ಪಂಪ್ ಮಾಡಿ ನೀರಿನ ಟ್ಯಾಂಕರ್ ನಿರ್ವಾಹಕರಿಗೆ ಮಾರಾಟ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿ ಅಕ್ರಮ ವಿದ್ಯುತ್ ಮೀಟರ್ ಅಳವಡಿಸಿ ಪಂಪ್ ಉಪಯೋಗಿಸುತ್ತಿದ್ದನೆಂದೂ ದೂರಲಾಗಿತ್ತು.

ದೂರುದಾರ ಈ ಎರಡು ಬಾವಿಗಳ ಕುರಿತಾದ ಮಾಹಿತಿಯನ್ನು ಆರ್ ಟಿಐ ಮೂಲಕ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News