ಆನ್‌ಲೈನ್ ವರದಿಗಾರಿಕೆ ಕೋರ್ಸ್‌ಗೆ ಅರ್ಜಿ ಆಹ್ವಾನ

Update: 2019-10-17 17:33 GMT

ಬೆಂಗಳೂರು, ಅ.17: ಬದುಕು ಕಮ್ಯುನಿಟಿ ಕಾಲೇಜು ವತಿಯಿಂದ ಮೂರು ತಿಂಗಳುಗಳ ಕಾಲ ‘ಅನ್ವೇಷಣೆ’ ಎಂಬ ಆನ್‌ಲೈನ್ ವರದಿಗಾರಿಕೆ ಕೋರ್ಸ್‌ಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೋರ್ಸ್ ನ.6 ರಿಂದ ಆರಂಭವಾಗಲಿದ್ದು, ವೃತ್ತಿನಿರತ ಪತ್ರಕರ್ತರು ತಮ್ಮ ವೃತ್ತಿ ಕೌಶಲ್ಯ ಹೆಚ್ಚಿಸಿಕೊಳ್ಳಲು ಸದಾವಕಾಶವಾಗಿದೆ. ಸುಮಾರು ಹತ್ತು ವರ್ಷಗಳಿಂದ ಗುಣಮಟ್ಟದ ಮಾಧ್ಯಮ ಶಿಕ್ಷಣ ನೀಡುತ್ತಿರುವ ಕಾಲೇಜು, ಈಗಾಗಲೇ ವೃತ್ತಿನಿರತರಾಗಿರುವ ಪತ್ರಕರ್ತರಿಗೆ ಅಗತ್ಯವಿರುವ ಹೊಸ ರೀತಿಯ ವೃತ್ತಿ ಕೌಶಲ್ಯಗಳನ್ನು ಈ ಕೋರ್ಸ್ ಮೂಲಕ ಪರಿಚಯಿಸಲು ಉದ್ದೇಶಿಸಲಾಗಿದೆ.

ಆಸಕ್ತರು, ಬದುಕು ಕಮ್ಯುನಿಟಿ ಕಾಲೇಜು, ನಂ.136/7, 2 ನೇ ಅಡ್ಡರಸ್ತೆ, ಎಲಿಫ್ಯಾಂಟ್ ರಸ್ತೆ, ಸೌತ್ ಎಂಡ್ ಸರ್ಕಲ್ ಲೈಬ್ರರಿ ಹಿಂಭಾಗ, 3 ನೇ ಬ್ಲಾಕ್, ಜಯನಗರ ಇಲ್ಲಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 99163 76954, 99450 65060 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News