ಆ ಯಂತ್ರಗಳೇನಾದರೂ ಬಂದಿದ್ದರೆ...

Update: 2019-10-17 18:36 GMT

ಮಾನ್ಯರೇ,

ಅಮೆರಿಕದಲ್ಲಿ ಒಳಚರಂಡಿ ಸ್ವಚ್ಛಗೊಳಿಸಲು ಮನುಷ್ಯರು ಅದರಲ್ಲಿ ಇಳಿಯುವುದಿಲ್ಲ. ಅಲ್ಲಿ ಒಳಚರಂಡಿಗಳನ್ನು ಏರೋಡೈನಾಮಿಕ್ ಯಂತ್ರಗಳ ಮೂಲಕ ಸ್ವಚ್ಛ ಗೊಳಿಸುತ್ತಾರೆ. ಆದರೆ ಭಾರತದಲ್ಲಿ ಒಳಚರಂಡಿ ಸ್ವಚ್ಛ ಮಾಡಲು ಪೌರ ಕಾರ್ಮಿಕರೇ ಸ್ವತಃ ಇಳಿಯುತ್ತಾರೆ ಮತ್ತು ಹೀಗೆ ಒಳಚರಂಡಿಯಲ್ಲಿ ಇಳಿಯುವ ಪೌರ ಕಾರ್ಮಿಕರಲ್ಲಿ ಪ್ರತಿವರ್ಷ ಸುಮಾರು 150 ಕಾರ್ಮಿಕರು ವಿಷವಾಯು ಸೇವಿಸಿ ಸಾಯುತ್ತಾರೆ. ಭಾರತದಲ್ಲಿಯೂ ಅಮೆರಿಕದಂತೆ ಸ್ವಯಂಚಾಲಿತ ಸಕ್ಕಿಂಗ್ ಯಂತ್ರಗಳ ಮೂಲಕ ಒಳಚರಂಡಿಗಳನ್ನು ಸ್ವಚ್ಛ ಮಾಡುವ ಅಭಿಯಾನ ನಡೆಸಬೇಕು ಎಂದು ಮೋದಿಯವರಿಗೆ ಒಮ್ಮೆಯಾದರೂ ಅನ್ನಿಸಲಿಲ್ಲವೇ? ಸ್ವಚ್ಛತಾ ಅಭಿಯಾನಕ್ಕಾಗಿ ಮೋದಿಗೆ ‘ಗ್ಲೋಬಲ್ ಗೋಲ್ ಕೀಪರ್’ ಪ್ರಶಸ್ತಿ ಕೊಟ್ಟ ಮೈಕ್ರೋಸಾಫ್ಟ್ ಫೌಂಡೇಷನ್‌ನ ಬಿಲ್ ಗೇಟ್ಸ್‌ರವರಿಗೆ ಮೋದಿ ಒಂದು ಮಾತು ಹೇಳಿದ್ದರೆ ಸಾಕಿತ್ತು, ಅವರು ಭಾರತಕ್ಕೆ ಕನಿಷ್ಠ ಒಂದು ಸಾವಿರ ಒಳಚರಂಡಿ ಸ್ವಚ್ಛಗೊಳಿಸುವ ಸ್ವಯಂಚಾಲಿತ ಆಧುನಿಕ ಯಂತ್ರಗಳನ್ನು ಖಂಡಿತ ದೇಣಿಗೆ ಕೊಡುತ್ತಿದ್ದರು. ನಮ್ಮ ಪೌರ ಕಾರ್ಮಿಕರಿಗೆ ವಿದೇಶದಲ್ಲಿರುವಂತಹ ಒಳಚರಂಡಿ ಸ್ವಚ್ಛಗೊಳಿಸುವ ಯಂತ್ರಗಳನ್ನು ಮೋದಿ ಅಮೆರಿಕದಿಂದ ತಂದಿದ್ದರೆ ಅವರ ನಡೆಯನ್ನು ಇಡೀ ವಿಶ್ವವೇ ಹೊಗಳುತ್ತಿತ್ತಲ್ಲವೇ?.

 -ಉದಯರಾಜ್ ಆಳ್ವ್ವ, ಮಂಗಳೂರು

Writer - -ಉದಯರಾಜ್ ಆಳ್ವ್ವ, ಮಂಗಳೂರು

contributor

Editor - -ಉದಯರಾಜ್ ಆಳ್ವ್ವ, ಮಂಗಳೂರು

contributor

Similar News