ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-10-18 18:40 GMT

ವಿದ್ಯಾರ್ಥಿವೇತನ

(ಅರ್ಹತೆ ಮತ್ತು ಆದಾಯ ಆಧಾರಿತ):

ಎಸ್‌ಟಿಎಫ್‌ಸಿ ಮೆರಿಟೋರಿಯಸ್ ಸ್ಕಾಲರ್‌ಶಿಪ್ ಪ್ರೋಗ್ರಾಂ

 ವಿವರ: ಅವಕಾಶ ವಂಚಿತ, ದುರ್ಬಲ ಕುಟುಂಬದ ವಾಹನ ಚಾಲಕರ ಕುಟುಂಬದ ವಿದ್ಯಾರ್ಥಿಗಳಿಗೆ ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಕಂಪೆನಿ ನೀಡುವ ಸ್ಕಾಲರ್‌ಶಿಪ್. ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 10 ಮತ್ತು 12ನೇ ತರಗತಿಯ ಬಳಿಕ ವೃತ್ತಿಪರ ಕೋರ್ಸ್ ಅಧ್ಯಯನಕ್ಕೆ ಬಹುವರ್ಷದ ಸ್ಕಾಲರ್‌ಶಿಪ್ ಒದಗಿಸಲಾಗುವುದು.

ಅರ್ಹತೆ: ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಕೋರ್ಸ್‌ಗಳಿಗೆ , ಅಥವಾ ಪದವಿ/ಇಂಜಿನಿಯರಿಂಗ್(3ರಿಂದ 4 ವರ್ಷದ)ಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಬಹುದು. ಅರ್ಜಿದಾರರು ವಾಣಿಜ್ಯ ವಾಹನದ ಚಾಲಕರ ಕುಟುಂಬದವರಾಗಿರಬೇಕು ಮತ್ತು ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ರೂ.ಗಿಂತ ಒಳಗಿರಬೇಕು.

ನೆರವು: ಆಯ್ಕೆಯಾದ ಐಟಿಐ/ಪಾಲಿಟೆಕ್ನಿಕ್/ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಾರ್ಷಿಕ 15,000 ರೂ.(ಗರಿಷ್ಠ 3 ವರ್ಷಕ್ಕೆ), ಪದವಿ, ಇಂಜಿನಿಯರಿಂಗ್‌ಗೆ ವಾರ್ಷಿಕ 35,000 ರೂ. (ಗರಿಷ್ಠ 4 ವರ್ಷ) ನೀಡಲಾಗುವುದು.

 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/SIMT1

***************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ಸೆಂಟ್ರಲ್ ಸೆಕ್ಟರ್ ಸ್ಕೀಂ ಆಫ್ ಸ್ಕಾಲರ್‌ಶಿಪ್ ಫಾರ್ ಕಾಲೇಜ್ ಆ್ಯಂಡ್ ವಿವಿ ಸ್ಟೂಡೆಂಟ್ಸ್ 2019-20

 ವಿವರ: ಆರ್ಥಿಕ ಅಶಕ್ತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ನೆರವಾಗುವ ಉದ್ದೇಶದಿಂದ ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಉನ್ನತ ಶಿಕ್ಷಣ ವಿಭಾಗ ನೀಡುವ ಸ್ಕಾಲರ್‌ಶಿಪ್.

ಅರ್ಹತೆ: ಶೇ.80 ಅಂಕಗಳೊಂದಿಗೆ 12ನೇ ತರಗತಿ ಪರೀಕ್ಷೆ ಪಾಸಾಗಿರುವವರು, ಮಾನ್ಯತೆ ಪಡೆದ ವಿವಿ/ಕಾಲೇಜು/ಸಂಸ್ಥೆಗಳಲ್ಲಿ ನಿಯಮಿತ ಪದವಿ/ಸ್ನಾತಕೋತ್ತರ ಪದವಿಗೆ ದಾಖಲಾಗಿರುವವರು ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ವರಮಾನ 8 ಲಕ್ಷ ರೂ.ಗಿಂತ ಕಡಿಮೆ ಇರಬೇಕು.

 ನೆರವು: ಆಯ್ಕೆಯಾದ ವಿದ್ಯಾರ್ಥಿಗಳು 3-4 ವರ್ಷದ ಪದವಿ ಕೋರ್ಸ್‌ಗೆ ವಾರ್ಷಿಕ 10,000 ರೂ. ಮೊತ್ತದ ಸ್ಕಾಲರ್‌ಶಿಪ್, ಸ್ನಾತಕೋತ್ತರ ಪದವಿಗೆ ವಾರ್ಷಿಕ 20,000 ರೂ. ಹಾಗೂ ವಿದ್ಯಾರ್ಥಿಗಳ ಕಲಿಯುವ ಕೋರ್ಸ್‌ನ ಅವಧಿಯನ್ನು ಆಧರಿಸಿ ಇತರ ಆರ್ಥಿಕ ನೆರವು ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/CSS11

***********

ವಿದ್ಯಾರ್ಥಿವೇತನ

(ಆದಾಯ ಆಧಾರಿತ):

ಬೀಡಿ ಕಾರ್ಮಿಕರು/ಸಿನೆಮಾ ಮಂದಿರಗಳ ಉದ್ಯೋಗಿಗಳು/ ಒಎಂಸಿಎಲ್/ಎಲ್‌ಎಸ್‌ಡಿಎಂ ಕಾರ್ಮಿಕರ ಮಕ್ಕಳಿಗೆ ಮೆಟ್ರಿಕೋತ್ತರ ಸ್ಕಾಲರ್‌ಶಿಪ್ 2019-20

ವಿವರ: ಬೀಡಿ ಕಾರ್ಮಿಕರು/ಸಿನೆಮಾ ಮಂದಿರಗಳ ಉದ್ಯೋಗಿಗಳು/ ಒಎಂಸಿಎಲ್/ಎಲ್‌ಎಸ್‌ಡಿಎಂ ಗಣಿ ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ಸ್ಕಾಲರ್‌ಶಿಪ್.

 ಅರ್ಹತೆ: ವಾರ್ಷಿಕ ಆದಾಯ 1 ಲಕ್ಷ ರೂ.ಗಿಂತ ಕಡಿಮೆ ಇರುವ ಬೀಡಿ ಕಾರ್ಮಿಕರು/ಸಿನೆಮಾ ಮಂದಿರಗಳ ಉದ್ಯೋಗಿಗಳು/ ಒಎಂಸಿಎಲ್/ಎಲ್‌ಎಸ್‌ಡಿಎಂ ಗಣಿ ಕಾರ್ಮಿಕರ ಮಕ್ಕಳು ಅರ್ಹರು. ಪದವಿ/ಐಟಿಐ/ಡಿಪ್ಲೊಮಾ/ಸ್ನಾತಕೋತ್ತರ ಪದವಿ ಕೋರ್ಸ್‌ಗೆ ದಾಖಲಾತಿ ಹೊಂದಿರಬೇಕು

ನೆರವು: ಆಯ್ಕೆಯಾದ ವಿದ್ಯಾರ್ಥಿಗಳು ಈಗ ಕಲಿಯುತ್ತಿರುವ ಕೋರ್ಸ್‌ನ ಆಧಾರದಲ್ಲಿ 15,000 ರೂ.ವರೆಗಿನ ನೆರವು ಪಡೆಯುತ್ತಾರೆ. ವಿದ್ಯಾರ್ಥಿನಿಯರಿಗೆ ಹೆಚ್ಚುವರಿ ಸ್ಕಾಲರ್‌ಶಿಪ್ ಸೌಲಭ್ಯವಿದೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/FAF8

**************

ವಿದ್ಯಾರ್ಥಿವೇತನ

(ಅಂತರ್‌ರಾಷ್ಟ್ರೀಯ ಮಟ್ಟ):

ಪ್ರೆಸಿಡೆಂಟ್ಸ್ ಪಿಎಚ್‌ಡಿ ಸ್ಕಾಲರ್‌ಶಿಪ್ಸ್, ಇಂಪೀರಿಯಲ್ ಕಾಲೇಜ್, ಲಂಡನ್ 2019-20

 ವಿವರ: ವಿಜ್ಞಾನ, ತಂತ್ರಜ್ಞಾನ ಮತ್ತು ಮೆಡಿಸಿನ್ ವಿಭಾಗದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸಲು ಲಂಡನ್‌ನ ಇಂಪೀರಿಯಲ್ ಕಾಲೇಜು 50 ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುತ್ತದೆ. ವಿದ್ಯಾರ್ಥಿಗಳಿಗೆ ಜಾಗತಿಕ ಪ್ರವೇಶಾವಕಾಶ ಒದಗಿಸುವ ಜೊತೆಗೆ ಜಾಗತಿಕ ಗಣ್ಯ ವೈಜ್ಞಾನಿಕ ಸಮುದಾಯದ ಮಾರ್ಗದರ್ಶನ ಒದಗಿಸಲಾಗುತ್ತದೆ.

ಅರ್ಹತೆ: ವಿಜ್ಞಾನ, ತಂತ್ರಜ್ಞಾನ ಅಥವಾ ಮೆಡಿಸಿನ್ ವಿಭಾಗದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕ ಪೂರ್ಣ ಮನ್ನಾ, ಜೊತೆಗೆ ತಿಂಗಳಿಗೆ 21,200 ಗ್ರೇಟ್‌ಬ್ರಿಟನ್ ಪೌಂಡ್ ಮೊತ್ತ ನೀಡಲಾಗುವುದು. ಜೊತೆಗೆ, ಕಲಿಕೆಯ ಆರಂಭದ 3 ವರ್ಷ ಹೆಚ್ಚುವರಿ 2000 ಗ್ರೇಟ್‌ಬ್ರಿಟನ್ ಪೌಂಡ್ ಅನ್ನು ಹೆಚ್ಚುವರಿ ಬಳಕೆ ನಿಧಿಯ ರೂಪದಲ್ಲಿ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಯಾವಾಗಲೂ ಸಲ್ಲಿಸಬಹುದು.

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/PPSICL298

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News