21 ಪದಕ ಗೆದ್ದ ಕಿರಿಯ ಬಾಕ್ಸರ್‌ಗಳು

Update: 2019-10-19 05:24 GMT

ಹೊಸದಿಲ್ಲಿ,ಅ.18: ಯುಎಇಯ ಫುಜೈರದಲ್ಲಿ ನಡೆಯುತ್ತಿರುವ ಏಶ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ 21 ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಬಾಕ್ಸರ್‌ಗಳ ತಂಡ 26 ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ. ಈ ಪದಕಗಳ ಪೈಕಿ ಆರು ಚಿನ್ನ ಮತ್ತು ಒಂಬತ್ತು ಬೆಳ್ಳಿ ಸೇರಿವೆ. ಭಾರತೀಯ ಪುರುಷರ ತಂಡ ಎರಡು ಚಿನ್ನ ಮತ್ತು ತಲಾ ಮೂರು ಬೆಳ್ಳಿ ಮತ್ತು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದರೆ ಮಹಿಳಾ ಬಾಕ್ಸರ್‌ಗಳ ತಂಡ ಗುರುವಾರ ಸಂಜೆ ನೀಡಿದ ಪ್ರದರ್ಶನದಲ್ಲಿ ನಾಲ್ಕು ಚಿನ್ನ, ಆರು ಬೆಳ್ಳಿ ಮತ್ತು ಮೂರು ಕಂಚು ಗೆದ್ದಿದೆ. ಪದಕಗಳ ಸಂಖ್ಯೆಯಲ್ಲಿ ಭಾರತದ ಮೊದಲ ಸ್ಥಾನದಲ್ಲಿದ್ದರೂ ಅತೀಹೆಚ್ಚು ಚಿನ್ನ ಗೆಲ್ಲಲು ವಿಫಲವಾಗಿದೆ. ಈ ಪಟ್ಟಿಯಲ್ಲಿ 20 ಚಿನ್ನದ ಪದಕ ಗೆದ್ದ ಉಝ್ಬೇಕಿಸ್ತಾನದ ನಂತರದ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. 26 ದೇಶಗಳು ಭಾಗವಹಿಸಿದ್ದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ 2003-04ರ ಅವಧಿಯಲ್ಲಿ ಜನಿಸಿದ ಬಾಕ್ಸರ್‌ಗಳಿಗೆ ಮಾತ್ರ ಸ್ಪರ್ಧಿಸಲು ಅವಕಾಶವಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News