ಪಂಚಾಯತ್ ನಿಂದ ಸಿಗದ ಸಹಾಯ: 8 ವರ್ಷದ ಪುತ್ರನೊಂದಿಗೆ ಸ್ಮಶಾನದಲ್ಲಿ ಮಲಗುತ್ತಿದ್ದ ಬುಡಕಟ್ಟು ವ್ಯಕ್ತಿ

Update: 2019-10-19 13:21 GMT
Photo: timesofindia.indiatimes.com

ಭೋಪಾಲ್, ಅ.19: ದಿನಗೂಲಿ ಕಾರ್ಮಿಕರೊಬ್ಬರು ತನ್ನ ಗುಡಿಸಲು ಕೆಲ ವಾರಗಳ ಹಿಂದೆ ಕುಸಿದ  ನಂತರ ಯಾವುದೇ ಸೌಲಭ್ಯ ದೊರೆಯದೆ ಪ್ರತಿ ರಾತ್ರಿ ತನ್ನ ಎಂಟು ವರ್ಷದ ಪುತ್ರನೊಂದಿಗೆ ಸ್ಮಶಾನದಲ್ಲಿ  ಕಳೆಯುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಮಧ್ಯ ಪ್ರದೇಶದ ಸಾಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಅವರು ಸ್ಮಶಾನದಲ್ಲಿ ಪುತ್ರನೊಂದಿಗೆ ಮಲಗಿಕೊಂಡಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ಥಳೀಯಾಡಳಿತ ಎಚ್ಚೆತ್ತುಕೊಂಡು ಉಳಿದುಕೊಳ್ಳಲು ಪಂಚಾಯತ್ ಭವನದಲ್ಲಿ ವ್ಯವಸ್ಥೆ ಮಾಡಿದೆಯಲ್ಲದೆ ಅಗತ್ಯ ಎಲ್ಲಾ ಸೌಲಭ್ಯಗಳನ್ನೂ ಒದಗಿಸುವ ಭರವಸೆ ನೀಡಿದೆ.

ರಾಮರತನ್ ಎಂಬ ಈ ಹೆಸರಿನ ವ್ಯಕ್ತಿಗೆ ದಿನದಲ್ಲಿ ಯಾವುದೇ ಕೆಲಸ ದೊರೆಯದೇ ಇದ್ದಾಗ ರಾತ್ರಿ ಸ್ಮಶಾನದಲ್ಲಿ ಮಲಗುತ್ತಾರೆ. "ನಾನು ಹಸಿವಿನಿಂದಿರುತ್ತೇನೆ ಆದರೆ ಭಿಕ್ಷೆ ಬೇಡುವುದಿಲ್ಲ'' ಎಂದು ಅವರು ಹೇಳುತ್ತಾರೆ.

ತನ್ನ ಗುಡಿಸಲು ಕುಸಿದ ನಂತರ ಪಂಚಾಯತ್ ನಿಂದ ಸಹಾಯ ಯಾಚಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ದೂರುತ್ತಾರೆ. ಸರಕಾರದ ಯಾವುದೇ ಸವಲತ್ತು ಲಭಿಸುತ್ತಿಲ್ಲ, ಬಿಪಿಎಲ್ ಕುಟುಂಬಕ್ಕಿರುವ ರೇಶನ್ ಕಾರ್ಡ್ ಕೂಡ ತನ್ನ ಬಳಿ ಇಲ್ಲ. ಅರ್ಜಿ ಸಲ್ಲಿಸಿದರೂ ದೊರಕಿಲ್ಲ ಎಂದು ಅವರು ಹೇಳುತ್ತಾರೆ.

ಅರ್ಜಿಗಳನ್ನೇಕೆ ನಿರ್ಲಕ್ಷ್ಯಿಸಲಾಗಿತ್ತು ಎಂದು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಹೆಚ್ಚುವರಿ ಸಿಇಒ ರಾಜೇಶ್ ಪಟರಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News