ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ ಹುತಾತ್ಮರಾದ ಪೊಲೀಸರೆಷ್ಟು ಗೊತ್ತೇ ?

Update: 2019-10-20 17:15 GMT

ಬೆಂಗಳೂರು, ಅ.20: ಪೊಲೀಸ್ ಸಂಸ್ಮರಣ ದಿನಾಚರಣೆ ನಾಳೆ(ಅ.21) ನಡೆಯಲಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ನಾಟದ 12 ಮಂದಿ ಪೊಲೀಸರು ಸೇರಿ ದೇಶಾದ್ಯಂತ ವಿವಿಧ ದರ್ಜೆಯ ಪೊಲೀಸ್ ಅಧಿಕಾರಿಗಳು ಒಳಗೊಂಡತೆ, ಒಟ್ಟು 292 ಪೊಲೀಸರು ಹುತಾತ್ಮರಾಗಿದ್ದಾರೆ.

ಸೋಮವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಮೈಸೂರು ರಸ್ತೆಯ ಸಿಎಎಆರ್ ಕೇಂದ್ರದ ಮೈದಾನದಲ್ಲಿ ಪೊಲೀಸ್ ಸಂಸ್ಮರಣ ದಿನಾಚರಣೆ ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುತಾತ್ಮರಿಗೆ ಗೌರವ ಸಲ್ಲಿಸುವರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹುತಾತ್ಮರು: ಹಾವೇರಿ ಜಿಲ್ಲೆಯ ಎಎಸ್ಸೈ ರಾಚಪ್ಪ, ಮುಖ್ಯಪೇದೆ ಎಸ್.ಎನ್. ಪುರುಷೋತ್ತಮ, ಕೆ.ಸೈದು ಸೊರಗೊಂಡ, ವೈ.ಚಂದ್ರಪ್ಪ, ಕೆ.ಕೆ.ಆನಂದ, ಡಿ.ಎಚ್. ದೇವಾಕಾತೆ, ಮಹೇಶ್ ಲಮಾಣಿ, ವೈ.ಸಿ. ಇಲಗೇರ್, ಶಿವಪ್ರಕಾಶ್ ವೀರಯ್ಯ ಲೂಟಿಮಠ, ವೀರಪ್ಪ ತಾತಪ್ಪ ಲತ್ತಿ, ಎಚ್.ಜಗದೀಶ್, ರಾಜು ಎಸ್.ಇಲಿಗಾಳ ಹುತಾತ್ಮ ಪೊಲೀಸರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News