'ನೀವು ಯಾವ ಬಟನ್ ಒತ್ತಿದರೂ ಬಿಜೆಪಿಗೆ ಮತ ಬೀಳುತ್ತದೆ': ಬಿಜೆಪಿ ಅಭ್ಯರ್ಥಿಯ ವಿಡಿಯೋ ವೈರಲ್

Update: 2019-10-21 08:43 GMT

ಹೊಸದಿಲ್ಲಿ, ಅ.21: ಹರ್ಯಾಣ ವಿಧಾನಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಇವಿಎಂ ಬಗ್ಗೆ ಬಿಜೆಪಿ ಅಭ್ಯರ್ಥಿಯೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಾಗಿ ಬಿಜೆಪಿ ಶಾಸಕ ಮತ್ತು ಅಭ್ಯರ್ಥಿ ಬಕ್ಷೀಶ್ ಸಿಂಗ್ ವಿರ್ಕ್ ವಿರುದ್ಧ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡುವ ಬಕ್ಷೀಶ್, "ನೀವು ಯಾವುದೇ ಬಟನ್ ಒತ್ತಿದರೂ ಚಿಂತೆಯಿಲ್ಲ, ಮತ ಬಿಜೆಪಿಗೆ ಬೀಳುತ್ತದೆ. ನೀವು ಯಾರಿಗೆ ಮತ ನೀಡಿದ್ದೀರಿ ಎನ್ನುವುದೂ ನಮಗೆ ತಿಳಿಯುತ್ತದೆ. ನಮಗದು ತಿಳಿಯುವುದಿಲ್ಲ ಎಂದು ಅಂದುಕೊಳ್ಳಬೇಡಿ. ಮೋದಿಜಿ ಬಹಳ ಬುದ್ಧಿವಂತರು. ಮನೋಹರ್ ಲಾಲ್ ಕೂಡ ಬುದ್ಧಿವಂತರು. ನೀವು ಯಾರಿಗೆ ಮತ ನೀಡಿದರೂ ಅದು ಬಿಜೆಪಿಗೆ ಬೀಳುತ್ತದೆ" ಎಂದು ಹೇಳುತ್ತಾರೆ.

ವಿಡಿಯೋ ವೈರಲ್ ಆಗಿ ವಿವಾದ ಸೃಷ್ಟಿಸಿದ ನಂತರ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಕ್ಷೀಶ್ , ಇದು ನಕಲಿ ವಿಡಿಯೋ. ತನಗೆ ಮತ್ತು ಪಕ್ಷಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ವಿರೋಧಿಗಳು ಈ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News