ಪಿಒಕೆಯಲ್ಲಿ ಸ್ವಾತಂತ್ರ ಪರ ರ‍್ಯಾಲಿ: ಇಬ್ಬರು ಮೃತ್ಯು, ಪೊಲೀಸ್ ಲಾಠಿ ಚಾರ್ಜ್‌ಗೆ 80 ಮಂದಿಗೆ ಗಾಯ

Update: 2019-10-23 06:17 GMT

ಶ್ರೀನಗರ, ಅ.23: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(ಪಿಒಕೆ) ಮುಝಫರಾಬಾದ್ ನಗರದಲ್ಲಿ ಮಂಗಳವಾರ ನಡೆದ ಸ್ವಾತಂತ್ರ ಪರ ರ‍್ಯಾಲಿಯ ವೇಳೆ ಇಬ್ಬರು ನಾಗರಿಕರು ಮೃತಪಟ್ಟಿದ್ದರೆ, ಪ್ರತಿಭಟನಾನಿರತರ ಮೇಲೆ ಪೊಲೀಸರು ನಡೆಸಿದ್ದ ಲಾಠಿಚಾರ್ಜ್‌ಗೆ ಇತರ 80 ಮಂದಿ ಗಾಯಗೊಂಡಿದ್ದಾರೆ ಎಂದು ANI ವರದಿ ಮಾಡಿದೆ.

ಸರ್ವ ಸ್ವತಂತ್ರ ಪಕ್ಷಗಳ ಮೈತ್ರಿ(ಎಐಪಿಎ)ಅಡಿಯಲ್ಲಿ ಒಂದಾದ ವಿವಿಧ ರಾಜಕೀಯ ಪಕ್ಷಗಳು ಮಂಗಳವಾರ ಪಿಒಕೆಯ ಮುಝಫರಾಬಾದ್‌ನಲ್ಲಿ ಸ್ವಾತಂತ್ರ ರ‍್ಯಾಲಿಗೆ ಕರೆ ನೀಡಿದ್ದವು. ಎಲ್ಲ ರಾಜಕೀಯ ಪಕ್ಷಗಳು ಈ ದಿನವನ್ನು ಕಪ್ಪು ದಿನವಾಗಿ ಆಚರಿಸಿದವು.

ಪ್ರತಿಭಟನೆ ಹಮ್ಮಿಕೊಂಡಿದ್ದವರ ಮೇಲೆ ಪೊಲೀಸರು ಅಶ್ರುವಾಯು ಹಾಗೂ ಲಾಠಿ ಚಾಜ್ ನಡೆಸಿ ಜನರನ್ನು ಚದುರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News