ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2019-10-25 18:37 GMT

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ): ಟಾಟಾ ಪ್ರತಿಷ್ಠಾನದ ಮೆಡಿಕಲ್ ಮತ್ತು ಹೆಲ್ತ್‌ಕೇರ್ ಸ್ಕಾಲರ್‌ಶಿಪ್ 2019-20

ವಿವರ: ಟಾಟಾ ಪ್ರತಿಷ್ಠಾನವು ಭಾರತದಲ್ಲಿ ಮೆಡಿಕಲ್ ಸೈಯನ್ಸ್ ಮತ್ತು ಹೆಲ್ತ್ ಕೇರ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗೆ ನೋಂದಣಿಯಾಗಿರುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಅರ್ಹತೆ: ಪ್ರಥಮ ವರ್ಷದ ಪರೀಕ್ಷೆ ತೇರ್ಗಡೆಯಾಗಿರುವ ಪದವಿ ವಿದ್ಯಾರ್ಥಿ ಅಥವಾ ಈಗ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿ. ಸ್ಕಾಲರ್‌ಶಿಪ್‌ಗೆ ನಿಗದಿಪಡಿಸಿರುವ ಕನಿಷ್ಠ ಅಂಕ ಗಳಿಸಿದವರು ಮಾತ್ರ ಅರ್ಹರು.

ನೆರವು: ಆಯ್ಕೆಯಾದ ಅಭ್ಯರ್ಥಿಗಳು ಕಾಲೇಜು/ಸಂಸ್ಥೆಗಳಿಗೆ ಪಾವತಿಸಿದ ಒಟ್ಟು ಶುಲ್ಕದ ಶೇ.30ರಿಂದ ಶೇ.80ರಷ್ಟು ಮೊತ್ತವನ್ನು ಸ್ಕಾಲರ್‌ಶಿಪ್ ರೂಪದಲ್ಲಿ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ನವೆಂಬರ್ 6, 2019 

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/TTM4

************************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ): ಯುಎನ್‌ಎಸ್‌ಡಬ್ಲು ಆರ್ಟ್ ಆ್ಯಂಡ್ ಡಿಸೈನ್ ಇಂಟರ್‌ನ್ಯಾಷನಲ್ ಸ್ಕಾಲರ್‌ಶಿಪ್ 2019-20

ವಿವರ: ಆಸ್ಟ್ರೇಲಿಯಾದ ಯುನಿವರ್ಸಿಟಿ ಆಫ್ ನ್ಯೂಸೌತ್ ವೇಲ್ಸ್(ಯುಎನ್‌ಎಸ್‌ಡಬ್ಲು)ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿನ್ಯಾಸಗಾರರು ಮತ್ತು ಕಲಾವಿದರನ್ನು ಯುಎನ್‌ಎಸ್‌ಡಬ್ಲು ಕಲೆ ಮತ್ತು ವಿನ್ಯಾಸ ಕಾಲೇಜಿನಲ್ಲಿ ಅಧ್ಯಯನ ನಡೆಸಲು ಪ್ರೋತ್ಸಾಹಿಸಲು ನೀಡುವ ಸ್ಕಾಲರ್‌ಶಿಪ್.

ಅರ್ಹತೆ: ಯುಎನ್‌ಎಸ್‌ಡಬ್ಲು ಕಲೆ ಮತ್ತು ವಿನ್ಯಾಸ ಕಾಲೇಜಿನಲ್ಲಿ ಪೂರ್ಣಾವಧಿಯ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಿರುವ ಅಂತರ್‌ರಾಷ್ಟ್ರೀಯ ವಿದ್ಯಾರ್ಥಿಗಳು ಅರ್ಹರು.

ನೆರವು: ಆಯ್ಕೆಯಾದ ಅಭ್ಯರ್ಥಿಗಳು 5000 ಆಸ್ಟ್ರೇಲಿಯನ್ ಡಾಲರ್ ಮೊತ್ತವನ್ನು ಎರಡು ಕಂತುಗಳಲ್ಲಿ ಪಡೆಯಲಿದ್ದಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/DIS2

************************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ): ಖರೋನಾ ಪ್ರೋಗ್ರಾಂ ಫಾರ್ ಸ್ಕಾಲರ್ಸ್ 2020

ವಿವರ: ಇಂಡೊ-ಯುಎಸ್ ಸೈಯನ್ಸ್ ಆ್ಯಂಡ್ ಟೆಕ್ನಾಲಜಿ ಫಾರಂ, ಭಾರತ ಸರಕಾರದ ಬಯೊಟೆಕ್ನಾಲಜಿ ವಿಭಾಗದ ನೆರವಿನೊಂದಿಗೆ ಘೋಷಿಸಿರುವ ಸ್ಕಾಲರ್‌ಶಿಪ್. ಬಯೊಟೆಕ್ನಾಲಜಿ ಮತ್ತು ಸಂಬಂಧಿತ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯಬಯಸುವ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ಜೊತೆಗೆ, ಯುನಿವರ್ಸಿಟಿ ಆಫ್ ವಿಸ್ಕಾನ್ಸಿನ್-ಮ್ಯಾಡಿಸನ್ ಹಾಗೂ ಸಹ ವಿವಿಗಳಲ್ಲಿ ಸಂಶೋಧನೆ ನಡೆಸಲು ನೆರವಾಗುವ ಉದ್ದೇಶವಿದೆ.

ಅರ್ಹತೆ: ಭಾರತದ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಬಿ.ಟೆಕ್, ಎಂಟೆಕ್, ಬಿಎಸ್ಸಿ, ಎಂಎಸ್ಸಿ, ಬಿಇ, ಎಂಇ, ಎಂಎಸ್, ಇಂಟಿಗ್ರೇಟೆಡ್ ಬಿಎಸ್-ಎಂಎಸ್, ಬಿವಿಎಸ್ಸಿ, ಎಂವಿಎಸ್ಸಿ, ಬಿಫಾರ್ಮ್, ಎಂಫಾರ್ಮ್, ಎಂಬಿಬಿಎಸ್, ಮಾಸ್ಟರ್ಸ್ ಇನ್ ಮೆಡಿಕಲ್ ಸೈಯನ್ಸ್ ಆ್ಯಂಡ್ ಟೆಕ್ನಾಲಜಿ ವಿಷಯದಲ್ಲಿ ಅಂತಿಮ ವರ್ಷಕ್ಕಿಂತ ಮೊದಲಿನ ವರ್ಷದಲ್ಲಿ ಕಲಿಯುತ್ತಿರುವವರು, 8.0 ಅಥವಾ ಹೆಚ್ಚಿನ ಸಿಜಿಪಿಎ/ಶೇ.80 ಮತ್ತು ಹೆಚ್ಚು/ಕನಿಷ್ಠ ಶೇ. 60 ಮತ್ತು ಹೆಚ್ಚು(ಎಂಬಿಬಿಎಸ್ ವಿದ್ಯಾರ್ಥಿಗಳಿಗೆ) ಅಂಕ ಗಳಿಸಿದವರು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳು ಸ್ಟೈಪೆಂಡ್, ವಿಮಾನಯಾನ ವೆಚ್ಚ ಹಾಗೂ ಆರೋಗ್ಯ ವಿಮೆ ಸೌಲಭ್ಯ ಪಡೆಯುತ್ತಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/KPF7

************************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ): ಆಸಿಯಾನ್ ವಿದ್ಯಾರ್ಥಿಗಳಿಗೆ ಎಂಎಚ್‌ಆರ್‌ಡಿ ಪಿಎಚ್‌ಡಿ ಫೆಲೋಶಿಪ್ 2019

ವಿವರ: ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಆಸಿಯಾನ್(ಎಎಸ್‌ಇಎಎನ್) ವಿದ್ಯಾರ್ಥಿಗಳಿಗೆ ಸಂಶೋಧನೆ ನಡೆಸಲು ನೆರವಾಗುವ ಉದ್ದೇಶದಿಂದ ನೀಡುವ ಫೆಲೊಶಿಪ್. ಆಸಿಯಾನ್ ರಾಷ್ಟ್ರಗಳ ಅರ್ಹ ವಿದ್ಯಾರ್ಥಿಗಳು ತಮಗೆ ಅನುಕೂಲವಾದ ಯಾವುದೇ ಐಐಟಿಯಲ್ಲಿ ಪಿಎಚ್‌ಡಿ ಅಧ್ಯಯನ ನಡೆಸಲು ಆರ್ಥಿಕ ನೆರವು ಒದಗಿಸಲಾಗುವುದು.

ಅರ್ಹತೆ: ಆಸಿಯಾನ್ ದೇಶದ ಯಾವುದೇ ಸ್ನಾತಕೋತ್ತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಥಮ 2 ವರ್ಷ 31,000 ರೂ. ಮತ್ತು ಮುಂದಿನ 3 ವರ್ಷ 35,000 ರೂ. ಆರ್ಥಿಕ ನೆರವಿನ ಜೊತೆಗೆ, 1,70,000ರೂ.ವರೆಗಿನ ಸಂಶೋಧನಾ ವೆಚ್ಚ ಹಾಗೂ ಸ್ಟೈಪೆಂಡ್‌ನ ಶೇ.24ರಷ್ಟು ವಾಸ್ತವ್ಯ ಭತ್ತೆ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಅಕ್ಟೋಬರ್ 31, 2019

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

 ಜಾಲತಾಣ: http://www.b4s.in/bharati/MAG1

************************

 ಕೃಪೆ: www.buddy4study.com

 ಫೋ: 08448709545, 08257484563

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News