ಕಾಲೇಜಿನಲ್ಲಿ ಸ್ಥಳವಿಲ್ಲದೆ ಮೈದಾನದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು!

Update: 2019-10-28 12:33 GMT
Photo: ANI

ಪಾಟ್ನಾ, ಅ.28: ಬಿಹಾರದ ಬೆಟ್ಟಿಯ ನಗರದ ರಾಮ್ ಲಖನ್ ಸಿಂಗ್ ಯಾದವ್ ಕಾಲೇಜಿನಲ್ಲಿ ರವಿವಾರ ನಡೆದ ಜಿಎಸ್ ಪರೀಕ್ಷೆಗೆ ಹಾಜರಾದ ಸಾವಿರಾರು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಸ್ಥಳಾವಕಾಶದ ಕೊರತೆ ಎದುರಾಗಿ ಹಲವು ವಿದ್ಯಾರ್ಥಿಗಳು ಅನಿವಾರ್ಯವಾಗಿ ತೆರೆದ ಮೈದಾನದಲ್ಲಿಯೇ ಪರೀಕ್ಷೆ ಬರೆಯುವಂತಾಗಿದೆ.

ವಿದ್ಯಾರ್ಥಿಗಳು ಶಾಲೆಯ ಕಾರಿಡಾರಿನಲ್ಲಿ ಹಾಗೂ ಅಂಗಳದಲ್ಲಿ ಕುಳಿತು ಬರೆಯುತ್ತಿದ್ದುದು ಹಾಗೂ ಸಾಮೂಹಿಕ ನಕಲು ಮಾಡುತ್ತಿರುವುದೂ ಕಂಡು ಬಂದಿದೆ.

ಕಾಲೇಜಿನಲ್ಲಿ 2000 ವಿದ್ಯಾರ್ಥಿಗಳಿಗೆ ಸ್ಥಳಾವಕಾಶವಿದ್ದರೂ ಪರೀಕ್ಷೆಗೆ 5,000ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರಿಂದ ಸಮಸ್ಯೆ ಎದುರಾಯಿತು ಎಂದು ಕಾಲೇಜಿನ ಪರೀಕ್ಷಾ ಉಸ್ತುವಾರಿ ಡಾ ರಾಜೇಶ್ವರ್ ಪ್ರಸಾದ್ ಹೇಳಿದ್ದಾರೆ.

ಕಾಲೇಜಿನಲ್ಲಿ ಸೂಕ್ತ ಪರೀಕ್ಷಾ ಸಭಾಂಗಣದ ಕೊರತೆಯಿಂದಾಗಿ ವಿದ್ಯಾರ್ಥಿಗಳು ಅಲ್ಲಲ್ಲಿ ಕುಳಿತು ಬರೆಯುವುದರಿಂದ ಅವರ ಕೈಬರಹವೂ ಚೆನ್ನಾಗಿ ಮೂಡಿ ಬರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News