ಕಲಬುರಗಿ: ಗೋಡೆ ಕುಸಿದು ಇಬ್ಬರು ಮೃತ್ಯು

Update: 2019-10-28 17:26 GMT

ಕಲಬುರಗಿ, ಅ.28: ಮನೆಯ ಗೋಡೆ ಕುಸಿದ ಪರಿಣಾಮ ಮಗು ಹಾಗೂ ಯುವತಿಯೊಬ್ಬಾಕೆ, ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ದಿಗಸಂಗಾ ಕೆ. ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಕಾವೇರಿ(20) ಹಾಗೂ ಅವರ ವಿದ್ಯಾಶ್ರೀ(5) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ಸುರಿದ ಮಳೆ ಪರಿಣಾಮ ಮನೆಯ ಮಣ್ಣಿನ ಗೋಡೆಗಳೆಲ್ಲಾ ಸಂಪೂರ್ಣ ನೆನೆದಿತ್ತು. ಗೋಡೆ ಇನ್ನೇನು ಕುಸಿಯುವ ಹಂತದಲ್ಲಿದ್ದಾಗ, ರಸ್ತೆ ಮೇಲೆ ತೆರಳುತ್ತಿದ್ದ ಇವರಿಬ್ಬರ ಮೇಲೆ ಗೋಡೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News