ಮಂಡ್ಯ: ವೃದ್ಧರು, ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ ಜಿಲ್ಲಾಧಿಕಾರಿ

Update: 2019-10-28 18:43 GMT

ಮಂಡ್ಯ, ಅ.28:  ನಗರದ ಜಿಲ್ಲಾಧಿಕಾರಿಗಳ ಗೃಹ ಕಚೇರಿಯಲ್ಲಿ ಜ್ಞಾನಸಿಂಧು ಹಾಗೂ ಸೇವಾ ಕಿರಣ ವೃದ್ಧಾಶ್ರಮದಲ್ಲಿರುವ ವೃದ್ಧರು ಹಾಗೂ ಬಾಲಮಂದಿರದ ಮಕ್ಕಳೊಂದಿಗೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೋಮವಾರ ದೀಪಾವಳಿ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲರೂ ಒಂದಾಗಿ ಭಾಗವಹಿಸಿ ಹಬ್ಬವನ್ನು ಆಚರಣೆ ಮಾಡಿದರೆ ಅದರಲ್ಲಿ ಸಿಗುವಂತಹ ಸಂತೋಷ, ನೆಮ್ಮದಿಯ ಬದುಕು ಯಾವುದರಲ್ಲೂ ಕೂಡ ಸಿಗುವುದಿಲ್ಲ ಎಂದರು.

ನಾನು ಪ್ರತಿ ವರ್ಷ ಅನಾಥಶ್ರಮದ ಮಕ್ಕಳು ಹಾಗೂ ಹಿರಿಯ ನಾಗರಿಕರೊಂದಿಗೆ ಹಬ್ಬವನ್ನು ಆಚರಿಸುತ್ತೇನೆ. ಕಷ್ಟಪಟ್ಟು ಓದಿ ಏಕಾಗ್ರತೆ ಪಡೆದುಕೊಂಡರೆ ನಿಮಗೂ ಕೂಡ ನೂರಾರು ಸಾವಿರಾರು ಜನರಿಗೆ ಸಹಾಯ ಮಾಡುವಂತಹ ಸ್ಥಾನಮಾನ ಸಿಗುತ್ತದೆ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಕೆಲವರಿಗೆ ತಂದೆತಾಯಿ ಇದ್ದರೆ, ಕೆಲವರಿಗೆ ತಂದೆತಾಯಿಗಳಿಲ್ಲ. ಕೆಲವರಿಗೆ ಊರೀ  ಗೊತ್ತಿಲ್ಲ. ಅತ್ಯಂತ ಶೋಷಿತರಿಗೆ, ಮುಖ್ಯವಾಹಿನಿಯಿಂದ ದೂರ ಇರುವವರಿಗೆಸರಕಾರ ಸರಕಾರ ಕಾರ್ಯಕ್ರಮಗಳನ್ನು ರೂಪಿಸಿದೆ. ಇದು ಸರಿಯಾದ ರೀತಿಯಲ್ಲಿ ಅನುಷ್ಟಾನವಾಗಬೇಕು ಎಂದು ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಜಿಲ್ಲಾ ವಾರ್ತಾಧಿಕಾರಿ ಟಿ.ಕೆ.ಹರೀಶ್, ಗಾಯತ್ರಿದೇವಿ ಪರಶುರಾಮ್ ಹಾಗೂ ಅನ್ನದಾನಿ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News