ದೇವೇಂದ್ರ ಫಡ್ನವೀಸ್ ಗೆ ಇಬ್ಬರು ಪಕ್ಷೇತರ ಶಾಸಕರ ಬೆಂಬಲ

Update: 2019-10-29 04:54 GMT

ಮಹಾರಾಷ್ಟ್ರ, ಅ.29: ಇಬ್ಬರು ಪಕ್ಷೇತರ ಶಾಸಕರಾದ ವಿನೋದ್ ಅಗರ್ವಾಲ್  ಮತ್ತು ಮಹೇಶ್ ಬಾಲ್ಡಿ ಅವರು ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿಗೆ ಬೆಂಬಲ ನೀಡಿದ್ದಾರೆ.

ವಿನೋದ್ ಅಗರ್ವಾಲ್  ಮತ್ತು ಮಹೇಶ್ ಬಾಲ್ಡಿ ಅವರು ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡು ಒಂದು ವಾರವಾಗಿದ್ದರೂ ಅಧಿಕಾರ ಹಂಚಿಕೆಯ ಬಗ್ಗೆ ಬಿಜೆಪಿ ಹಾಗೂ ಶಿವಸೇನಾ ನಡುವಣ ಹಗ್ಗಜಗ್ಗಾಟದಿಂದಾಗಿ ಸರಕಾರ ರಚನೆ ಮಹಾ ಕಗ್ಗಂಟಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News