ಕಾಶ್ಮೀರಕ್ಕೆ ವಿದೇಶಿ ನಿಯೋಗ: ಕೇಂದ್ರಕ್ಕೆ ಮಾಯಾವತಿ ತರಾಟೆ

Update: 2019-10-29 16:54 GMT

ಲಕ್ನೋ,ಅ.29: ಐರೋಪ್ಯ ಒಕ್ಕೂಟದ ಸಂಸದರ ನಿಯೋಗಕ್ಕೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ಮೋದಿ ಸರಕಾರವನ್ನು ತರಾಟೆಗೆತ್ತಿಕೊಂಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು,ಸರಕಾರವು ಭಾರತೀಯ ಸಂಸದರು ಕಣಿವೆಗೆ ತೆರಳಲು ಅವಕಾಶ ನೀಡಿದರೆ ಉತ್ತಮವಾಗಿರುತ್ತಿತ್ತು ಎಂದಿದ್ದಾರೆ.

‘370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ವಸ್ತುಸ್ಥಿತಿಯನ್ನು ಅರಿಯಲು ಐರೋಪ್ಯ ಒಕ್ಕೂಟದ ಸಂಸದರನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸುವ ಬದಲು ದೇಶದ ಸಂಸದರನ್ನು ಸರಕಾರವು ಕಳುಹಿಸಿದ್ದರೆ ಚೆನ್ನಾಗಿರುತ್ತಿತ್ತು ’ಎಂದು ಮಾಯಾವತಿ ಮಂಗಳವಾರ ಟ್ವೀಟಿಸಿದ್ದಾರೆ. ಮಂಗಳವಾರದಿಂದ ತನ್ನ ಎರಡು ದಿನಗಳ ಜಮ್ಮು-ಕಾಶ್ಮೀರ ಭೇಟಿಯನ್ನು ಆರಂಭಿಸಿರುವ ನಿಯೋಗದಲ್ಲಿ ಇಂಗ್ಲಂಡ್,ಫ್ರಾನ್ಸ್,ಜರ್ಮನಿ,ಇಟಲಿ,ಪೋಲಂಡ್,ಝೆಕ್ ರಿಪಬ್ಲಿಕ್ ಮತ್ತು ಸ್ಲೊವಾಕಿಯಾಗಳ ಸಂಸದರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News