ನೋಟ್‌ಬ್ಯಾನ್, ಜಿಎಸ್‌ಟಿ ಆರ್ಥಿಕ ಹಿಂಜರಿತಕ್ಕೆ ಮುಖ್ಯ ಕಾರಣ: ಸೆಂಟ್ರಮ್ ಬ್ರೋಕರೇಜ್ ವರದಿ

Update: 2019-11-06 07:12 GMT

ಮುಂಬೈ: ಪ್ರಸಕ್ತ ಆರ್ಥಿಕ ಹಿಂಜರಿತವು ಕಳೆದ 20 ವರ್ಷಗಳಲ್ಲೇ ಅತ್ಯಂತ ತೀವ್ರ ರೂಪದ್ದಾಗಿದೆಯೆಂದು ಹಣಕಾಸು ಸೇವೆಗಳ ಸಂಸ್ಥೆ ಸೆಂಟ್ರಮ್  ಬ್ರೋಕರೇಜ್ ಮಂಗಳವಾರ ವರದಿ ಮಾಡಿದೆ. ಈ ಆರ್ಥಿಕ ಹಿಂಜರಿತದ ಪರಿಣಾಮವು ಗ್ರಾಮೀಣ ಹಾಗೂ ನಗರಪ್ರದೇಶಗಳ ಬೇಡಿಕೆಗಳ ಮೇಲೆ ಅಭೂತಪೂರ್ವವಾದ ಪರಿಣಾಮವನ್ನು ಬೀರಿದೆ ಎಂದು ಅದು ಹೇಳಿದೆ.

ದೇಶದ ಆರ್ಥಿಕ ಬೆಳವಣಿಗೆಯನ್ನು 2021ರ ದ್ವಿತೀಯಾರ್ಧದ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆಯಿಯೆಂದು ಅದು ಭವಿಷ್ಯ ನುಡಿದಿದೆ.

 ನಗದು ಅಮಾನ್ಯತೆ.ಜಿಎಸ್‌ಟಿ ಯ ರೂಪದಲ್ಲಿ ದೇಶವು ಎದುರಿಸಿದಾಗ ಆಘಾತಗಳ ಪರಿಣಾಮವಾಗಿ ಆರ್ಥಿಕ ಹಿಂಜರಿತವುಂಟಾಗಿದೆಯಂದು ಅದು ತಿಳಿಸಿದೆ.

ಕಾಲ ಹಾಗೂ ವ್ಯಾಪ್ತಿಯ ದೃಷ್ಟಿಯಿಂದಲೂ ಪ್ರಸಕ್ತ ಅರ್ಥಿಕ ಹಿಂಜರಿತವು ಅತ್ಯಂತ ದೀರ್ಘಕಾಲೀನವಾಗಿದೆ ಹಾಗೂ ತೀವ್ರತರದ್ದಾಗಿದೆ ಎಂದು ವರದಿಯು ಅಭಿಪ್ರಾಯಿಸಿದೆ.

  ಸರಕಾರದ ಮಧ್ಯಪ್ರವೇಶವಿಲ್ಲದೆ ಅರ್ಥಿಕ ಹಿನ್ನಡೆಯನ್ನು ಸರಿಪಡಿಸಲು ಸಾದ್ಯವಿಲ್ಲ ಎಂದು ಹೇಳಿರುವ ವರದಿಯು 2020-21 ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅರ್ಥಿಕ ಹಿಂಜರಿತವು ಪಾತಾಳಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಆದರೆ 2021-22ರ ಹಣಕಾಸು ವರ್ಷದ ಮೊದಲನೆ ಹಾಗೂ ಎರಡನೆ ತ್ರೈಮಾಸಿಕದಲ್ಲಿ ಅರ್ಥಿಕತೆಯು ನಿಧಾನವಾಗಿ ಸಹಜತೆಯತ್ತ ಮರಳುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News