ನೆಹರೂ ಮೆಮೋರಿಯಲ್ ಮ್ಯೂಸಿಯಂ ಸದಸ್ಯತ್ವದಿಂದ ಖರ್ಗೆ, ಜೈರಾಂ ರಮೇಶ್, ಕರಣ್ ಸಿಂಗ್ ರನ್ನು ಕೈಬಿಟ್ಟ ಸರಕಾರ

Update: 2019-11-06 08:35 GMT

ಹೊಸದಿಲ್ಲಿ, ನ.6: ಕೇಂದ್ರ ಸರಕಾರ ನೆಹರೂ ಮೆಮೋರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರೆರಿ ಸೊಸೈಟಿಯನ್ನು ಪುನಾರಚಿಸಿ ಈ ಹಿಂದೆ ಸದಸ್ಯರಾಗಿದ್ದ ಕಾಂಗ್ರೆಸ್ಸಿಗರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಂ ರಮೇಶ್ ಹಾಗೂ ಕರಣ್ ಸಿಂಗ್ ಅವರನ್ನು ಕೈಬಿಟ್ಟು ಟಿವಿ ಪತ್ರಕರ್ತ ರಜತ್ ಶರ್ಮ,  ಪ್ರಸೂನ್ ಜೋಷಿ ಮತ್ತಿತರರನ್ನು ಸೇರಿಸಿದೆ.

ಈ ಸೊಸೈಟಿಯ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿಯಿದ್ದರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಾಧ್ಯಕ್ಷರಾಗಿದ್ದಾರೆ ಎಂದು ಮಂಗಳವಾರದ ಆದೇಶ ತಿಳಿಸಿದೆ.

ಯುಜಿಸಿಯ ಅಧ್ಯಕ್ಷರು ಹಾಗೂ ಜವಾಹರಲಾಲ್ ನೆಹರೂ ಮೆಮೋರಿಯಲ್ ಫಂಡ್ ಪ್ರತಿನಿಧಿ ಹೊರತಾಗಿ ಸೊಸೈಟಿಯ ನಿರ್ದೇಶಕ ರಾಘವೇಂದ್ರ ಸಿಂಗ್ ಕೂಡ ಸಮಿತಿಯ ಹೊಸ ಸದಸ್ಯರಾಗಿದ್ದಾರೆ.

ಇತರ ಸದಸ್ಯರಲ್ಲಿ ಅನಿರ್ಬನ್ ಗಂಗೂಲಿ, ಸಚ್ಚಿದಾನಂದ ಜೋಷಿ, ಕಪಿಲ್ ಕಪೂರ್, ಲೋಕೇಶ್ ಚಂದ್ರ, ಮಕರಂದ್ ಪರಾಂಜಪೆ, ಕಿಶೋರ್ ಮಕ್ವಾನ, ಕಮಲೇಶ್ ಜೋಷಿಪುರ ರಿಝ್ವಾನ್ ಕದ್ರಿ ಹಾಗೂ ರಾಮ್ ಬಹಾದ್ದೂರ್ ರೈ ಸೇರಿದ್ದಾರೆ.

ಕೇಂದ್ರ ಸಚಿವರಾದ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ರಮೇಶ್ ಪೊಖ್ರಿಯಾಲ್, ಪ್ರಕಾಶ್ ಜಾವ್ಡೇಕರ್, ವಿ ಮುರಳೀಧರನ್, ಪ್ರಹ್ಲಾದ್ ಸಿಂಗ್ ಪಟೇಲ್, ಐಸಿಸಿಆರ್ ಅಧ್ಯಕ್ಷ ವಿನಯ್ ಸಹಸ್ರಬುದ್ಧೆ, ಪ್ರಸಾರ ಭಾರತಿ ಅಧ್ಯಕ್ಷ ಎ ಸೂರ್ಯಪ್ರಕಾಶ್ ಹಾಗೂ ಸಂಸ್ಕೃತಿ, ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳು ಸೊಸೈಟಿಯ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News