ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ತಂತ್ರಾಂಶ

Update: 2019-11-06 17:07 GMT

ಬೆಂಗಳೂರು, ನ.6: ರಾಜ್ಯ ಸರಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲು ಇ-ಆಡಳಿತ ಕೇಂದ್ರವು ಏಕೀಕೃತ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು, ಈ ತಂತ್ರಾಂಶವು ವಿದ್ಯಾರ್ಥಿಯ ಆಧಾರ್ ಜೋಡಣೆಗೊಂಡಿರುವ ಬ್ಯಾಂಕ್‌ಖಾತೆಗೆ ನೇರ ನಗದು ವರ್ಗಾವಣೆಯನ್ನು ಮಾಡುತ್ತದೆ.

ದಾಖಲೆ ದೃಢೀಕರಿಸಿಕೊಳ್ಳಿ: ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಅಧ್ಯಯನ/ಬೊನಾಫೈಡ್ ಪ್ರಮಾಣಪತ್ರ, ಶುಲ್ಕ ರಶೀದಿ, ಹಾಸ್ಟೆಲ್ ಪ್ರವೇಶಾತಿ ಪ್ರಮಾಣಪತ್ರ, ಅಂಕಪಟ್ಟಿ, ರಕ್ಷಣಾ ಸಿಬ್ಬಂದಿ ಸೇವಾ ಪ್ರಮಾಣಪತ್ರ, ಪೋಷಕರ ವೇತನ ಪ್ರಮಾಣಪತ್ರ ಇವುಗಳಲ್ಲಿ ಯಾವುದಾದರೊಂದು ದಾಖಲೆಗಳನ್ನು ದೃಢೀಕರಿಸಿಕೊಳ್ಳಬೇಕು. ದಾಖಲೆಗಳ ಪಟ್ಟಿಗಾಗಿ ಎಸ್.ಎಸ್.ಪಿ ಪೋರ್ಟಲ್ ಅನ್ನು ಪರಿಶೀಲಿಸಬಹುದಾಗಿದೆ.

ಇ-ದೃಢೀಕರಿಸಿಕೊಳ್ಳುವುದು ಹೇಗೆ?: http://ssp.postmatric.karnataka.gov.inಗೆ ಭೇಟಿ ನೀಡಿ, ಲಿಂಕ್ ಅನ್ನು ಕ್ಲಿಕ್ ಮಾಡಿ. ದಾಖಲೆಯ ವಿವರಗಳನ್ನು ನಮೂದಿಸಿ ನಂತರ ಅಪ್‌ಲೋಡ್ ಮಾಡಬೇಕು. ಅರ್ಜಿ ಸಲ್ಲಿಸಲು ನ.30ರಂದು ಕೊನೆಯ ದಿನ. ಹೆಚ್ಚಿನ ವಿವರಗಳಿಗಾಗಿ ಸಹಾಯವಾಣಿ ಸಂಖ್ಯೆ: 080-44554455 ಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News