ಪ್ರಧಾನಿ ಮೋದಿ ಜನರ ಕಷ್ಟಗಳಿಗೆ ಸ್ಪಂದಿಸುವುದನ್ನು ಕಲಿಯಬೇಕು: ನಂಜಾವಧೂತ ಸ್ವಾಮೀಜಿ

Update: 2019-11-06 18:34 GMT

ಕೊಪ್ಪ, ನ.6: ಒಕ್ಕಲಿಗ ಸಮುದಾಯದವರು ಇತರ ಜಾತಿಯೊಂದಿಗೆ ಸಹಬಾಳ್ವೆಯೊಂದಿಗೆ ಜೀವನ ನಡೆಸಿ, ದೇಶದ ಪ್ರಗತಿಯಲ್ಲಿ ತಮ್ಮನ್ನು ಜೋಡಿಸಿಕೊಂಡು ಬಂದಿದ್ದಾರೆ ಎಂದು ಸ್ಪಟಿಕಾಪುರಿ ಮಹಸಂಸ್ಥಾನ ಪೀಠಾಧ್ಯಕ್ಷ ಜಗದ್ಗುರು ಶ್ರೀ ನಂಜಾವಧೂತ ಸ್ವಾಮೀಜಿ ಆರ್ಶಿವಚನ ನೀಡಿದರು

ಇಲ್ಲಿನ ಒಕ್ಕಲಿಗರ ಹಿತ ರಕ್ಷಣಾ ವೇದಿಕೆ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಒಕ್ಕಲಿಗರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಕೃಷಿಯನ್ನು ಮೂಲವಾಗಿ ಮಾಡಿಕೊಂಡು ಸಮಾಜದಲ್ಲಿ ಯಾರಿಗೂ ನೋವನ್ನು ನೀಡದೆ, ಇತರರಿಗೆ ಸೌಖ್ಯವನ್ನು ನೀಡುವ ಗುಣವನ್ನು ಮೈಗೂಡಿಸಿಕೊಂಡು ಬಂದಿದ್ದು ಒಕ್ಕಲಿಗ ಸಮುದಾಯ ಎಂದು ಅಭಿಪ್ರಾಯಪಟ್ಟರು.

ದೇಶದ ಅಭಿವೃದ್ದಿಗೆ ಒಕ್ಕಲಿಗೆ ಪಾತ್ರ ಮಹತ್ವದ್ದು, ಕೆಂಪೇಗೌಡರಿಂದ ಬೆಂಗಳೂರು ನಿರ್ಮಾಣವಾಯಿತು, ಅವರು ಅಂದು ರೂಪಿಸಿದ್ದ ಬೆಂಗಳೂರು ಪಟ್ಟಣದ ನಕಾಶೆಯನ್ನು ಬ್ರಿಟಿಷರು ಇಂಗ್ಲೆಂಡಿಗೆ ತೆಗೆದುಕೊಂದು ಹೋಗಿದ್ದರು, ರಾಜ್ಯದ ಪ್ರಮುಖ ಕಟ್ಟಡಗಳಾದ ವಿಧಾನ ಸೌಧ, ವಿಕಾಸ ಸೌಧ, ಸುವರ್ಣ ಸೌದ ಕಟ್ಟಡಗಳನ್ನು ನಿರ್ಮಿಸಿದ್ದು ಒಕ್ಕಲಿಗರು, ಬೆಂಗಳೂರನ್ನು ಸಿಲಿಕಾನ್ ಸಿಟಿಯಂತೆ ರೂಪಿಸಿದ್ದು ಒಕ್ಕಲಿಗರು, ಒಕ್ಕಲಿಗರು ಕಟ್ಟುವ ಕೆಲಸವನ್ನು ಮಾಡುತ್ತಾರೆ, ಹೊಸ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಾರೆ ಎಂದ ಅವರು, 

ಐ.ಟಿ, ಇ.ಡಿ ಸಂಸ್ಥೆಗಳು ತಮ್ಮ ಇತಿಮಿತಿ ಒಳಗೆ ಕೆಲಸವನ್ನು ಮಾಡಿದರೆ ಸ್ವಾಗತ, ಅದರೇ ಅಂತಹ ಕೇಂದ್ರದ ಸಂಸ್ಥೆಗಳ ಮೇಲೆ ಯಾವುದೇ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ. ಆಯಾ ಸಂಸ್ಥೆಗಳು ಅನ್ಯಾಯ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಲಿ ಇದನ್ನು ಸ್ವಾಗತಿಸೋಣ, ಅದರೇ ಉದ್ದೇಶಪೂರ್ವಕವಾಗಿ ಇನ್ನೊಬ್ಬರನ್ನು ತಪ್ಪಿತಸ್ಥರನ್ನು ಮಾಡುವುದು ಸಲ್ಲದು. ಉದ್ಯಮಿ ಸಿದ್ದಾರ್ಥ್ ಈ ದೇಶದ ಆಸ್ತಿ, ಅವರು ಐವತ್ತು ಸಾವಿರ ಜನರಿಗೆ ಉದ್ಯೋಗ ನೀಡಿದ್ದರು, ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಸಮಾಜಕ್ಕೆ ಆದ ನಷ್ಟ ಎಂದರು.

ಪ್ರಧಾನಿ ಮೋದಿಯವರು ಜಾಗತಿಕ ಮಟ್ಟದಲ್ಲಿ ಹೆಸರು ದೇಶದ ಹೆಸರನ್ನು ಕೊಂಡೊಯ್ಯುತ್ತಿರುವ ರೀತಿ ಸ್ವಾಗತರ್ಹ, ಅದರೇ ತಮ್ಮ ದೇಶದ ಜನರ ಕಷ್ಟಗಳಿಗೆ ಸ್ವಂದಿಸುವ ಗುಣವನ್ನು ಮೋದಿಯವರು ಕಲಿಯಬೇಕು, ಇಂದು ಆರ್.ಸಿ.ಇ.ಪಿ ವಿರುದ್ದ ದೇಶದ ಜನರ ಅಸಹಯಾತೆಯ ಕೂಗನ್ನು ಅರಿತು ಅದರಿಂದ ದೂರ ಸರಿದಿರುವುದು ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಬೇಕು ಎಂದರು.

ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ, ಒಕ್ಕಲಿಗ ಸಮುದಾಯ ಎಂದರೆ ಸ್ವಾಭಿಮಾನ ಉಳ್ಳ ಕೃಷಿಕರ ಸಮುದಾಯ. ಅದರೇ ಇತ್ತಿಚೀನ ದಿನದಲ್ಲಿ ಸಮುದಾಯದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಐವತ್ತು ಸಾವಿರ ಉದ್ಯೋಗ ನೀಡಿದ ಸಿದ್ದಾರ್ಥ್ ರದ್ದು ಆತ್ಮಹತ್ಯೆಯಲ್ಲ ಅದು ಇ.ಡಿ ಇಲಾಖೆ ಮಾಡಿದ ಕೊಲೆ. ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮೇಲೆ ನಡೆದ ದಾಳಿ ರಾಜಕೀಯ ಪ್ರೇರಿತವಾದದ್ದು. ಕ್ಷೇತ್ರದಲ್ಲಿ ಒಂದು ವೇಳೆ ಒಕ್ಕಲಿಗರಿಗೆ ತೊಂದರೆಯಾದರೆ ನಾನು ರಾಜಕೀಯ ನಿವೃತ್ತಿ ಪಡೆದು ಸಮುದಾಯದ ಪರವಾಗಿ ಹೋರಾಟ ಮಾಡುತ್ತೇನೆ ಎಂದರು.

ಒಕ್ಕಲಿಗ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕೌರಿ ಮಾತನಾಡಿ, ಕ್ಷೇತ್ರದಲ್ಲಿ ಹಳದಿ ಎಲೆ ರೋಗ, ಒತ್ತುವರಿ ಉಳಿದಂತೆ ಹಲವಾರು ಸಮಸ್ಯೆಗಳನ್ನು ಎದುರು ನೋಡುತ್ತಿದ್ದೇವೆ. ಸೆಕ್ಷನ್ 4 ನಂತಹ ಸಮಸ್ಯೆಗಳು ಇಲ್ಲಿನ ಜನರನ್ನು ನಿರಂತವಾಗಿ ಕಾಡುತ್ತಿದೆ. ಈ ಸಮಸ್ಯೆಗಳಿಂದ ನಾವು ಮುಕ್ತಿ ಹೊಂದಲು ಒಂದುಗೂಡುವುದು ಅಗತ್ಯ. ರಾಜಕಾರಿಣಿಗಳು ರಾಜಕೀಯಕ್ಕಾಗಿ ರಾಜಕಾರಣ ಮಾಡಿ ಅದರೇ ಜನರ ನೋವುಗಳೊಂದಿಗೆ ರಾಜಕಾರಣ ಮಾಡಬೇಡಿ ಎಂದರು.

ವಕೀಲ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿ, ಕ್ಷೇತ್ರದ ಒಕ್ಕಲಿಗ ಸಮುದಾಯ ಒಂದುಗೂಡಿ ಸಮಾವೇಶ ನಡೆಸಿದ್ದು ಇದೇ ಪ್ರಥಮ, ಇಂದು ಒಕ್ಕಲಿಗರು ಹಮ್ಮಿಕೊಂಡ ಪ್ರತಿಭಟನೆ ಅವರ ಆಸ್ಮಿತೆಯ ಪ್ರಶ್ನೆಯಾಗಿತ್ತು. ರಾಜ್ಯದಲ್ಲಿ ಸಮುದಾಯದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ನೆಲದ ಮಕ್ಕಳಿಗೆ ರಕ್ಷಣೆಯಿಲ್ಲ ಎನ್ನುವ ವಾತಾವರಣ ನಿರ್ಮಾಣವಾಗಿದೆ ಎಂದರು.

ಒಕ್ಕಲಿಗ ಸಂಘದ ಉಪಾಧ್ಯಕ್ಷ ಹೆಚ್.ಜಿ ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಒಕ್ಕಲಿಗರಿಗೆ ಅನ್ಯಾಯ ಮಾಡಿದೆ, ಅಪರೇಷನ್ ಕಮಲ ನಡೆಸಿ ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸಿದೆ. ಅವರದ್ದೆ ಪಕ್ಷದ ಒಕ್ಕಲಿಗ ಜನಾಂಗಕ್ಕೆ ಸೇರಿದ ಆರ್. ಆಶೋಕರನ್ನು ಮೂಲೆ ಗುಂಪು ಮಾಡಿದ್ದಾರೆ. ತೀರ್ಥಹಳ್ಳಿ ಕ್ಷೇತ್ರದ ಆರಗ ಜ್ಞಾನೇಂದ್ರ ನಾಲ್ಕು ಭಾರಿ ಗೆದ್ದರು ಮಂತ್ರಿ ಸ್ಥಾನ ನೀಡದೆ ಅವರಿಗೆ ದ್ರೋಹ ಎಸಗಿದ್ದಾರೆ ಎಂದು ತಿಳಿಸಿದರು.

ಸಮಾವೇಶಕ್ಕೂ ಮುನ್ನಾ ವೀರಭದ್ರ ದೇವಸ್ಥಾನದಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದವರೆಗೆ ಮೆರವಣಿಗೆ ನಡೆಸಿ, ನಂತರ ಸಮಾವೇಶವನ್ನು ಏರ್ಪಡಿಸಲಾಯಿತು. ಸಮಾವೇಶದಲ್ಲಿ ಕೆ. ಎಂ ಮರಿಗೌಡ, ಶಂಕರಪ್ಪ, ದಿವಾಕರ್, ಸುಮಾ ರಂಗನಾಥ್, ಬಿ.ಸಿ ಗೀತಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮAತ್, ಅಂಬಿಕ, ಮೀಗಾ ಚಂದ್ರಶೇಖರ್, ರಾಮಕೃಷ್ಣ, ಪೃಥ್ವಿರಾಜ್ ಕೌರಿ, ದುರ್ಗಾ ಚರಣ್, ಅಧಿತಿ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News