ವರ್ಗಾವಣೆ ವಿರೋಧಿಸಿ ವೈದ್ಯಾಧಿಕಾರಿಯ ಏಕಾಂಗಿ ಧರಣಿ

Update: 2019-11-06 18:46 GMT

ಮಂಡ್ಯ, ನ.6: ರಾಜಕೀಯ ಒತ್ತಡದಿಂದ ಏಕಾಏಕಿ ಬೇರೆ ಕಡೆಗೆ ಹೋಗಿ ವರದಿ ಮಾಡಿಕೊಳ್ಳುವಂತೆ ಆದೇಶ ಮಾಡಿರುವ ಅಧಿಕಾರಿಗಳ ಕ್ರಮ ಖಂಡಿಸಿ ಮದ್ದೂರಿನ ಗುರುಶಾಂತಪ್ಪ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಶಿಕಲಾ ಏಕಾಂಗಿಯಾಗಿ ಆಸ್ಪತ್ರೆಯ ಎದುರು ಬುಧವಾರ ಧರಣಿ ನಡೆಸಿದರು.

ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಚೇಗೌಡ ಅವರು ನನ್ನನ್ನು ಇಲ್ಲಿಂದ ಬೆಂಗಳೂರಿನ ನಿರ್ದೇಶನಾಲಯಕ್ಕೆ ಹೋಗಿ ವರದಿ ಮಾಡಿಕೊಳ್ಳಲು ಆದೇಶ ಮಾಡಿದ್ದಾರೆ. ನಾನು ವೈದ್ಯಾಧಿಕಾರಿಯಾಗಿ ಮುಂದುವರೆಯುವ ಸಂಬಂಧ ಬೆಂಗಳೂರಿನ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಪ್ರಕರಣ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿ ಆದೇಶ ಮಾಡಿರುವುದು ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಮಕ್ಕಳ ತಜ್ಞ ಡಾ.ಶಿವಸ್ವಾಮಿ ಅವರು, ನಾನು ದಲಿತ ಮಹಿಳೆ ಎಂಬ ಕಾರಣಕ್ಕೆ ಜಾತಿನಿಂದನೆ ಮಾಡುತ್ತಿದ್ದಾರೆ ಹಾಗೂ ದೌರ್ಜನ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನನಗೆ ಬುದ್ಧಿಮಾಂದ್ಯ ಮಗನಿದ್ದು, ಅವನಿಗೆ ಪೋಷಣೆ ಮಾಡಬೇಕಾಗಿರುವುದಿಂದ ನಾನು ಮಂಡ್ಯದಿಂದ ಬೆಂಗಳೂರಿಗೆ ಹೋಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಟ್ಟಣದ ಗುರುಶಾಂತಪ್ಪ ಸರಕಾರಿ ಆಸ್ಪತ್ರೆಯಲ್ಲೆ ಕೆಲಸ ನಿರ್ವಹಣೆ ಮಾಡಲು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News