‘ಸಾಲಮನ್ನಾ’ ಎಚ್‌ಡಿಕೆ ಸಹಾಯವಾಣಿಗೆ ಮೂರು ದಿನದಲ್ಲೆ 2,930 ಕರೆಗಳು

Update: 2019-11-07 17:52 GMT

ಬೆಂಗಳೂರು, ನ. 6: ರೈತರ ಬೆಳೆ ಸಾಲಮನ್ನಾ ಸಂಬಂಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ನಿವಾಸದಲ್ಲೆ ಆರಂಭಿಸಿರುವ ‘ಬೆಳೆ ಸಾಲಮನ್ನಾ ಸಹಾಯವಾಣಿ’ಗೆ ಮೂರು ದಿನಗಳಲ್ಲಿ ಒಟ್ಟು 2,930 ಕರೆಗಳು ಬಂದಿವೆ.

ಗುರುವಾರ ಈ ಸಂಬಂಧ ಟ್ವೀಟ್ ಮಾಡಿರುವ ಕುಮಾರಸ್ವಾಮಿ ನ.4ಕ್ಕೆ 1251, ನ.5ಕ್ಕೆ 937 ಹಾಗೂ ನ.6ಕ್ಕೆ 742 ಕರೆಗಳು ಬಂದಿವೆ. ಈ ಸಹಾಯವಾಣಿಯನ್ನು ಇನ್ನೂ ಹಲವು ವಾರಗಳು ಮುಂದುವರೆಸುತ್ತೇವೆ. ರೈತರು 91643 05868 ನಂಬರ್‌ಗೆ ಕರೆ ಮಾಡಿ ತಮ್ಮ ಬೆಳೆ ಸಾಲಮನ್ನಾದ ವಿವರ ಪಡೆಯಬಹುದು ಎಂದು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News