ಕೊಳ್ಳೇಗಾಲ: ವಿವಿಧ ಕಾಮಗಾರಿಗಳಿಗೆ ಚಾಲನೆ

Update: 2019-11-07 18:55 GMT

ಕೊಳ್ಳೇಗಾಲ,ನ.07: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ಕಾಮಗಾರಿಗಳಿಗೆ ಶಾಸಕ ಎನ್.ಮಹೇಶ್ ಚಾಲನೆ ನೀಡಿದರು.

ತಾಲ್ಲೂಕಿನ ಹರಳೆ ಮತ್ತು ಹೊಸಹಂಪಾಪುರ ಗ್ರಾಮದಲ್ಲಿ ಟಿಎಸ್‍ಪಿ ಯೋಜನೆಯಡಿ 1 ಕೋಟಿ ರಸ್ತೆ ಮತ್ತು ಚರಂಡಿ ಕಾಮಗಾರಿ ಹಾಗೂ ಜಿ.ಪಂ ಅನುದಾನದಲ್ಲಿ 10 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ, ಗೊಬ್ಬಳಿಪುರ ಗ್ರಾಮದ ಮುಖ್ಯರಸ್ತೆ ಎಸ್‍ಟಿಪಿ ಯೋಜನೆಯಡಿ 1.35 ಕೋಟಿ ವೆಚ್ಚದ ರಸ್ತೆ ಕಾಮಗಾರಿ, ಟಗರಪುರ ಗ್ರಾಮದಲ್ಲಿ ಎಸ್‍ಸಿಪಿ ಯೋಜನೆಯಡಿ 9 ಲಕ್ಷ ಹಾಗೂ ವಿಶೇಷ ಘಟಕ ಯೋಜನೆಯಡಿ 18 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಹಾಗೂ ಮಲ್ಲಹಳ್ಳಿ ಮೋಳೆ ಎಸ್.ಸಿ.ಪಿ ಯೋಜನೆಯಡಿ 10 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು. 

ಪಟ್ಟಣದ ಮುಡಿಗುಂಡ ಬಡಾವಣೆಯಲ್ಲಿ ಎಸ್‍ಸಿಪಿ ಯೋಜನೆಯಡಿ 10 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಹಾಗೂ ಬೆಂಡರಹಳ್ಳಿ ಬಡಾವಣೆಯಲ್ಲಿ ಟಿಎಸ್‍ಪಿ ಯೋಜನೆಯಡಿ 10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಿಲಾನ್ಯಾಸ ನೇರವೇರಿಸಿದರು.

ನಂತರ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯ 6 ಗ್ರಾಮಗಳಲ್ಲಿ ಸುಮಾರು 3 ಕೋಟಿ 2 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗುಣಮಟ್ಟದಿಂದ ಕಾಮಗಾರಿಯನ್ನು ನಡೆಸಬೇಕು. ಸ್ಥಳೀಯ ಜನಪ್ರತಿನಿಧಿಗಳು ನಿಂತು ಸಣ್ಣಪುಟ್ಟ ಅಡಚಣೆಯನ್ನು ಬಗೆಹರಿಸಿ ಕಾಮಗಾರಿಯನ್ನು ಮಾಡಿಸಿಕೊಳ್ಳಬೇಕು ಎಂದರು.

ಈಗಾಗಲೇ ತೇರಂಬಳ್ಳಿಯಿಂದ ಕಲಿಯೂರು ರಸ್ತೆ ಸಂಪರ್ಕ ಕಲ್ಪಿಸುವ ಗೊಬ್ಬಳಿಪುರ ಮುಖ್ಯರಸ್ತೆಯು ಕಾಮಗಾರಿಯ ಈಗಾಗಲೇ ಬಹಳಷ್ಟು ತಡವಾಗಿ ರಸ್ತೆ ಸಂಚರಿಸುವ ಜನರಿಗೆ ತೊಂದರೆ ಉಂಟಾಗಿದೆ. ಆದ್ದರಿಂದ ಗೊಬ್ಬಳಿಪುರ ಮುಖ್ಯರಸ್ತೆ ಶೀಘ್ರವಾಗಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಕೆಂಪನಪಾಳ್ಯ, ತಿಮ್ಮರಾಜೀಪುರ, ಕುರುಬನಕಟ್ಟೆ ಹಾಗೂ ಜಕ್ಕಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಸಚಿವರಾಗಿದ್ದಾಗ ಮಾಡಿದ್ದ ಸಾಕಷ್ಟು ಕಾಮಗಾರಿಗೆÀ ಇನ್ನೂ ಆರಂಭವಾಗಿಲ್ಲ, ಬಸ್‍ಡಿಪೋ ಬಳಿ ರಸ್ತೆ ಹದಗೆಟ್ಟು ಸಂಚರಿಸುವ ವಾಹನ ಸವಾರರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅಲ್ಲಿನ ಗ್ರಾಮಸ್ಥರು ಕೇಳುತ್ತಿದ್ದಾರೆ ಎಂದು ಜಿ.ಪಂ ಸದಸ್ಯ ಮುಳ್ಳೂರು ಕಮಲ್ ಕೇಳಿದ ಪ್ರಶ್ನೆಗೆ ಶಾಸಕರು ಮಾತನಾಡಿ, ನಗರೋತ್ಹಾನ ಅನುದಾನದಡಿ ಮುಂದುವರೆದ ಭಾಗದಲ್ಲಿ ಶೀಘ್ರದಲ್ಲಿ ಕಾಮಗಾರಿ ನಡೆಯಲು ಈಗಾಗಲೇ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು. ಇದುವರೆಗೂ ಮಾಡಿರುವ ಗುದ್ದಲಿಪೂಜೆ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಈ ಸಂಧರ್ಭದಲ್ಲಿ ತಾ.ಪಂ ಉಪಾಧ್ಯಕ್ಷೆ ಲತಾರಾಜಣ್ಣ, ಸದಸ್ಯ ಕೃಷ್ಣಪ್ಪ, ಪದ್ಮಪ್ರಭುಸ್ವಾಮಿ, ನಗರಸಭೆ ಸದಸ್ಯೆ ಪುಷ್ಪಶಾಂತರಾಜು, ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಟಗರಪುರ ಗ್ರಾ.ಪಂ ಅಧ್ಯಕ್ಷ ನಿಂಗರಾಜು, ಕುಂತೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ, ಹರಳೆ ಗ್ರಾ.ಪಂ ಸದಸ್ಯರುಗಳು ಸಿದ್ದರಾಜು, ಕೃಷ್ಣಯ್ಯ, ಲೋಕೊಪಯೋಗಿ ಇಲಾಖೆ ಎಇಇ ಮಹದೇವಸ್ವಾಮಿ, ಕೆ.ಆರ್.ಡಿ.ಐ.ಎಲ್ ಎಇಇ ರಮೇಶ್, ಎ.ಇ.ಶೋಭ, ಗುತ್ತಿಗೆದಾರರು ಮಹದೇವ, ರವಿಕುಮಾರ್, ಪ್ರದೀಪ್, ಲೋಕೇಶ್ ಸೇರಿದಂತೆ ಅನೇಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News