ಸಂಸದೀಯ ಹಣಕಾಸು ಸ್ಥಾಯಿ ಸಮಿತಿಗೆ ಮನಮೋಹನ್ ಸಿಂಗ್ ನೇಮಕ

Update: 2019-11-11 15:23 GMT

ಹೊಸದಿಲ್ಲಿ, ನ.11: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸಂಸದೀಯ ಹಣಕಾಸು ಸ್ಥಾಯಿ ಸಮಿತಿಗೆ ರಾಜ್ಯಸಭಾ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನೇಮಿಸಿದ್ದಾರೆ. ಇನ್ನೊಬ್ಬ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ಸ್ಥಾನಕ್ಕೆ  ಮನಮೋಹನ್ ಸಿಂಗ್ ರನ್ನು ನೇಮಿಸಲಾಗಿದೆ.

ದಿಗ್ವಿಜಯ್ ಸಿಂಗ್ ಅವರನ್ನು ನಗರಾಭಿವೃದ್ಧಿ ಸಂಸದೀಯ ಸ್ಥಾಯಿ ಸಮಿತಿಗೆ ನೇಮಿಸಲಾಗಿದೆ.

ಮನಮೋಹನ್ ಸಿಂಗ್ ಅವರಿಗೆ ಅನುವು ಮಾಡಿಕೊಡಲೆಂದೇ ದಿಗ್ವಿಜಯ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆಂದು  ತಿಳಿದು ಬಂದಿದೆ.

ಮನಮೋಹನ್ ಸಿಂಗ್ ಅವರು ಈ ವರ್ಷದ ಜೂನ್‌ನಲ್ಲಿ ತನ್ನ ರಾಜ್ಯಸಭಾ ಸದಸ್ಯತ್ವ ಅಂತ್ಯಗೊಳ್ಳುವ ಮುನ್ನ 2014 ಸೆಪ್ಟೆಂಬರ್‌ನಿಂದ 2019 ಮೇವರೆಗೆ ಹಣಕಾಸು ಕುರಿತ ಸಂಸದೀಯ ಸಮಿತಿಯ ಸದಸ್ಯರಾಗಿದ್ದರು. ಆಗಸ್ಟ್‌ನಲ್ಲಿ ಅವರು ರಾಜಸ್ಥಾನದಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಸಮಿತಿಯು ತನ್ನ ಹಿಂದಿನ ಅಧಿಕಾರಾವಧಿಯಲ್ಲಿ ನೋಟು ನಿಷೇಧ ಮತ್ತು ಜಿಎಸ್‌ಟಿಯಂತಹ ವಿವಿಧ ವಿವಾದಾತ್ಮಕ ವಿಷಯಗಳನ್ನು ಚರ್ಚೆಗೆತ್ತಿಕೊಂಡಿದ್ದು,ಆ ಸಂದರ್ಭ ಮನಮೋಹನ್ ಸಿಂಗ್ ಅತ್ಯಂತ ಕ್ರಿಯಾಶೀಲ ಪಾತ್ರವನ್ನು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News