ವಿಧಾನಸಭಾ ಉಪ ಚುನಾವಣೆ: ಮೊದಲ ದಿನ 6 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Update: 2019-11-11 16:25 GMT

ಬೆಂಗಳೂರು, ನ.11: ಶಾಸಕರ ರಾಜೀನಾಮೆಯಿಂದ ತೆರವುಗೊಂಡಿದ್ದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಎರಡನೆ ಅವಧಿಯ ನಾಮಪತ್ರ ಸಲ್ಲಿಕೆಯ ಮೊದಲನೇ ದಿನವೇ 6 ಅಭ್ಯರ್ಥಿಗಳಿಂದ ನಾಮಪತ್ರಗಳು ಸಲ್ಲಿಕೆಯಾಗಿವೆ.

ಶಾಸಕರು ರಾಜೀನಾಮೆ ನೀಡಿದ ಬಳಿಕ ವಿಧಾನಸಭೆಯ ಸಭಾಧ್ಯಕ್ಷ ರಮೇಶ್ ಕುಮಾರ್ ಎಲ್ಲರನ್ನು ಅನರ್ಹಗೊಳಿಸಿ, ತೀರ್ಪು ನೀಡಿದ್ದರು. ಇದಾದ ಬಳಿಕ ಅನರ್ಹರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ನಡುವೆ ಕೇಂದ್ರ ಚುನಾವಣಾ ಆಯೋಗ ಸಭಾಧ್ಯಕ್ಷರು ನೀಡಿದ ತೀರ್ಪಿನ ಆಧಾರದ ಮೇಲೆ ಉಪ ಚುನಾವಣೆಯನ್ನು ಘೋಷಣೆ ಮಾಡಿತ್ತಾದರೂ, ಸುಪ್ರೀಂಕೋರ್ಟ್‌ನ ನಿರ್ದೇಶನದಂತೆ ಚುನಾವಣೆಯನ್ನು ಡಿ.5ಕ್ಕೆ ಮುಂದೂಡಲಾಗಿತ್ತು.

ಕಳೆದ ಬಾರಿ ಚುನಾವಣಾ ಅಧಿಸೂಚನೆ ಹೊರಡಿಸಿದ್ದ ಸಂದರ್ಭದಲ್ಲಿಯೇ ಹಲವು ರಾಜಕೀಯ ಪಕ್ಷಗಳಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದನ್ನೂ ಪರಿಗಣಿಸಿರುವ ಹಿನ್ನೆಲೆಯಲ್ಲಿ ಒಟ್ಟಾರೆ 35 ಅಭ್ಯರ್ಥಿಗಳಿಂದ 36 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.

ಎಲ್ಲೆಲ್ಲಿ ಎಷ್ಟು:

ಅಥಣಿ: 6 ಅಭ್ಯರ್ಥಿಗಳು

ಕಾಗವಾಡ: 5 ಅಭ್ಯರ್ಥಿಗಳು

ಗೋಕಾಕ: 2 ಅಭ್ಯರ್ಥಿಗಳು

ಯಲ್ಲಾಪುರ: 4 ಅಭ್ಯರ್ಥಿಗಳು

ಹಿರೇಕೆರೂರು: ಯಾರೂ ಇಲ್ಲ

ರಾಣಿಬೆನ್ನೂರು: 1 ಅಭ್ಯರ್ಥಿ

ವಿಜಯನಗರ: 3 ಅಭ್ಯರ್ಥಿಗಳು

ಚಿಕ್ಕಬಳ್ಳಾಪುರ: 1 ಅಭ್ಯರ್ಥಿ

ಕೆ.ಆರ್.ಪುರಂ: 4 ಅಭ್ಯರ್ಥಿಗಳು

ಯಶವಂತಪುರ: 4 ಅಭ್ಯರ್ಥಿಗಳು

ಮಹಾಲಕ್ಷ್ಮಿಲೇಔಟ್: ಯಾರೂ ಇಲ್ಲ

ಶಿವಾಜಿನಗರ : 2 ಅಭ್ಯರ್ಥಿಗಳು

ಹೊಸಕೋಟೆ: ಯಾರೂ ಇಲ್ಲ

ಕೃಷ್ಣರಾಜಪೇಟೆ: 1 ಅಭ್ಯರ್ಥಿ

ಹುಣಸೂರು: 2 ಅಭ್ಯರ್ಥಿಗಳು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News