ಬಿಎಸ್ಸೆನ್ನೆಲ್ ನ 70 ಸಾವಿರ ಉದ್ಯೋಗಿಗಳಿಂದ ಸ್ವಯಂ ನಿವೃತಿ ಆಯ್ಕೆ

Update: 2019-11-11 16:41 GMT

ಹೊಸದಿಲ್ಲಿ, ನ. 11: ಕಳೆದ ವಾರ ಆರಂಭಿಸಲಾದ ಸ್ವಯಂ ನಿವೃತ್ತಿ ಯೋಜನೆಯನ್ನು (ವಿಆರ್‌ಎಸ್) ಬಿಎಸ್ಸೆನ್ನೆಲ್ ನ 70 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಈಗಾಗಲೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರ ಸ್ವಾಮಿತ್ವದ ಟೆಲಿಕಾಂ ಕಾರ್ಪೋರೇಶನ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಪಿ.ಕೆ. ಪೂರ್ವರ್ ಸೋಮವಾರ ತಿಳಿಸಿದ್ದಾರೆ.

ಬಿಎಸ್ಸೆನ್ನೆಲ್ ನ ಒಟ್ಟು 1.50 ಲಕ್ಷ ಉದ್ಯೋಗಿಗಳಲ್ಲಿ ಸುಮಾರು 1 ಲಕ್ಷ ಉದ್ಯೋಗಿಗಳು ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್)ಗೆ ಅರ್ಹರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್)ಗೆ 77 ಸಾವಿರ ಉದ್ಯೋಗಿಗಳ ಆಂತರಿಕ ಗುರಿಯನ್ನು ಬಿಎಸ್ಸೆನ್ನೆಲ್ ನಿಗದಿಪಡಿಸಿತ್ತು. ಪ್ರಸ್ತುತ ಯೋಜನೆ ಅಡಿಯಲ್ಲಿ ಸದ್ಯ ನಿವೃತ್ತಿ ಯೋಜನೆ (ವಿಆರ್‌ಎಸ್) ದಿನಾಂಕ 2020 ಜನವರಿ 31ರಂದು ಜಾರಿಗೆ ಬರಲಿದೆ.

 ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಆಯ್ಕೆ ಮಾಡಿಕೊಂಡ ಉದ್ಯೋಗಿಗಳ ಸಂಖ್ಯೆ ಇದುವರೆಗೆ 77 ಸಾವಿರಕ್ಕೆ ಏರಿಕೆಯಾಗಿದೆ ಎಂದು ಪೂರ್ವರ್ ಹೇಳಿದ್ದಾರೆ. ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಆರಂಭಿಸುವುದರಿಂದ ಉದ್ಯೋಗಿಗಳ ಸಂಖ್ಯೆ ಅರ್ಧಕ್ಕೆ ಇಳಿಕೆ ಆಗುವುದರಿಂದ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ದೂರವಾಣಿ ಕೇಂದ್ರಗಳಲ್ಲಿ ವ್ಯವಹಾರ ನಿರಂತರತೆ ಹಾಗೂ ಸುಲಲಿತ ಕಾರ್ಯ ನಿರ್ವಹಣೆಗೆ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಟೆಲಿಕಾಂ ಕಾರ್ಪೋರೇಶನ್ ಬಿಎಸ್‌ಎನ್‌ಎಲ್‌ಗೆ ಸೂಚಿಸಿದೆ.

ಬಿಎಸ್‌ಎನ್‌ಎಲ್ ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) -2019 ಕಳೆದ ವಾರ ಆರಂಭಿಸಲಾಗಿದೆ. ಇದು ಡಿಸೆಂಬರ್ 3ರ ವರೆಗೆ ಇರಲಿದೆ. 70 ಸಾವಿರದಿಂದ 80 ಸಾವಿರ ಉದ್ಯೋಗಿಗಳನ್ನು ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡರೆ, ವೇತನ ಪಾವತಿಯಲ್ಲಿ 7 ಸಾವಿರ ಕೋಟಿ ರೂಪಾಯಿ ಉಳಿತಾಯ ಮಾಡಬಹುದು ಎಂಬುದು ಬಿಎಸ್‌ಎನ್‌ಎಲ್ ಚಿಂತನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News