ಭಾರತೀಯ ಟೆಸ್ಟ್ ತಂಡದ ನೆಟ್ ಪ್ರಾಕ್ಟೀಸ್‌ನಲ್ಲಿ ಭುವನೇಶ್ವರ !

Update: 2019-11-13 05:36 GMT

ಇಂದೋರ್,ನ.12: ಸ್ನಾಯುಸೆಳೆತದಿಂದ ಚೇತರಿಸಿಕೊಳ್ಳುತ್ತಿರುವ ವೇಗದ ಬೌಲರ್ ಭುವನೇಶ್ವರ ಕುಮಾರ್ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ನಿರತವಾಗಿದ್ದ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಅಭ್ಯಾಸ ನಡೆಸಿ ತನ್ನ ಫಿಟ್ನೆಸ್‌ನ್ನು ಪರೀಕ್ಷೆಗೊಡ್ಡಿದರು.

ಭುವನೇಶ್ವರ್ ಅವರ ಅಂತಿಮ ಹಂತದ ಪುನಶ್ಚೇತನ ಪ್ರಕ್ರಿಯೆಯನ್ನು ಭಾರತೀಯ ತಂಡದ ಟೀಮ್ ಮ್ಯಾನೇಜ್‌ಮೆಂಟ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯಲ್ಲಿ ಆಡಿ ವೆಸ್ಟ್ ಇಂಡೀಸ್‌ನಿಂದ ವಾಪಸಾದ ಬಳಿಕ ಭುವನೇಶ್ವರ್ ಗಾಯದ ಸಮಸ್ಯೆ ಕುರಿತು ಭಾರತೀಯ ಕ್ರಿಕೆಟ್ ತಂಡ ಚಿಂತಿತವಾಗಿತ್ತು. ಭುವನೇಶ್ವರ್ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಪುನಶ್ಚೇತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಭಾರತ ಕ್ರಿಕೆಟ್ ತಂಡದೊಂದಿಗೆ ಸ್ಕಿಲ್ ಸೆಶನ್‌ನಲ್ಲಿ ಭಾಗವಹಿಸಲು ಭುವಿ ಇಂದೋರ್‌ಗೆ ಬಂದಿದ್ದಾರೆ. ಅವರು ಫಿಟ್ನೆಸ್ ಪಡೆಯುವುದನ್ನು ಟೀಮ್ ಮ್ಯಾನೇಜ್‌ಮೆಂಟ್ ಬಯಸುತ್ತಿದೆ ಎಂದು ನೆಟ್ ಸೆಶನ್‌ನಲ್ಲಿ ಭುವನೇಶ್ವರ ಹಾಜರಾತಿಯ ಕುರಿತ ಪ್ರಶ್ನೆಗೆ ತಂಡದ ಮೂಲಗಳು ತಿಳಿಸಿವೆ.

 ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಜತೆ ಕ್ಯಾಚಿಂಗ್ ಸೆಶನ್‌ನಲ್ಲಿ ಭಾಗವಹಿಸಿದ್ದ ಭುವಿ, ಸ್ವಲ್ಪ ಸಮಯ ನೆಟ್ ಅಭ್ಯಾಸದಲ್ಲಿ ಭಾಗಿಯಾದರು. ಪೂರ್ಣ ರನ್-ಅಪ್ ಮೂಲಕ ಕೆಲವು ಎಸೆತಗಳನ್ನು ಎಸೆದರು.

29ರ ಹರೆಯದ ಭುವನೇಶ್ವರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಸದಸ್ಯರಾಗಿದ್ದು, ನೆಟ್ ಪ್ರಾಕ್ಟೀಸ್‌ನಲ್ಲಿ ಭುವನೇಶ್ವರ ಉಪಸ್ಥಿತಿ ಟೀಮ್ ಇಂಡಿಯಾಕ್ಕೆ ಸ್ವಾಗತಾರ್ಹ ಸುದ್ದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News