ಆರ್‌ ಟಿಐ ವ್ಯಾಪ್ತಿಗೆ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿ: ಸುಪ್ರೀಂ ಕೋರ್ಟ್ ತೀರ್ಪು

Update: 2019-11-13 16:44 GMT

ಹೊಸದಿಲ್ಲಿ, ನ. 13: ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಬರುತ್ತದೆ ಎಂದು ಬುಧವಾರ ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್, ‘‘ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ನ್ಯಾಯಮೂರ್ತಿಗಳು ಕಾನೂನಿಗಿಂತ ಮೇಲೆ ಇರಲು ಸಾಧ್ಯವಿಲ್ಲ’’ ಎಂದು ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಒಂದು ಭಾಗವಾಗಿದ್ದ ಐವರು ಸದಸ್ಯರ ಸಾಂವಿಧಾನಿಕ ಪೀಠ 2010ರಲ್ಲಿ ಸುಪ್ರೀಂ ಕೋರ್ಟ್‌ನ ಮಹಾ ಕಾರ್ಯದರ್ಶಿ ಹಾಗೂ ಅದರ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ದಿಲ್ಲಿ ಉಚ್ಚ ನ್ಯಾಯಾಲಯ ಹಾಗೂ ಕೇಂದ್ರ ಮಾಹಿತಿ ಆಯೋಗದ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪನ್ನು ಎಪ್ರಿಲ್‌ನಲ್ಲಿ ಕಾಯ್ದಿರಿಸಿತ್ತು. ‘‘ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆ ಸಾರ್ವಜನಿಕ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ಮಾಹಿತಿ ಹಕ್ಕು ಹಾಗೂ ಖಾಸಗಿತನದ ಹಕ್ಕು ಒಂದೇ ನಾಣ್ಯದ ಎರಡು ಮುಖಗಳು’’ ಎಂದು ದಿಲ್ಲಿ ಉಚ್ಚ ನ್ಯಾಯಾಲಯ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

 ಎನ್.ವಿ. ರಮಣ, ಡಿ.ವೈ. ಚಂದ್ರಚೂಡ, ದೀಪಕ್ ಗುಪ್ತಾ ಹಾಗೂ ಸಂಜೀವ್ ಖನ್ನಾ ಸಾಂವಿದಾನಿಕ ಪೀಠದಲ್ಲಿ ಇದ್ದ ಇತರ ನ್ಯಾಯಮೂರ್ತಿಗಳು. 2010ರಲ್ಲಿ ನೀಡಿದ ಚಾರಿತ್ರಿಕ ತೀರ್ಪಿನಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯ ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿ ಬರುತ್ತದೆ. ‘ನ್ಯಾಯಾಂಗ ಸ್ವಾತಂತ್ರ್ಯ’ ವಿಶೇಷಾಧಿಕಾರ ಅಲ್ಲ. ಅದು ಅವರ ಮೇಲೆ ಹೊರಿಸಲಾದ ಜವಾಬ್ದಾರಿಯಾಗಿದೆ ಎಂದರು.

ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಲ್ಲಿ ತರುವುದರಿಂದ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಡ್ಡಿ ಉಂಟಾಗುತ್ತದೆ ಎಂಬ ಸುಪ್ರೀಂ ಕೋರ್ಟ್‌ನ ವಾದವನ್ನು ಉಚ್ಚ ನ್ಯಾಯಾಲಯ ತಿರಸ್ಕರಿಸಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯ ತರಬೇಕೆಂದು ಕಾನೂನು ಹೋರಾಟವನ್ನು ಮಾಹಿತಿ ಹಕ್ಕು ಕಾರ್ಯಕರ್ತ ಎಸ್.ಸಿ. ಅಗರ್‌ವಾಲ್ ಆರಂಭಿಸಿದ್ದರು.

ಅವರ ವಕೀಲ ಪ್ರಶಾಂತ್ ಭೂಷಣ್ ಮನವಿ ಸಲ್ಲಿಸಿ ಸುಪ್ರೀಂ ಕೋರ್ಟ್ ತನ್ನ ಸ್ವಂತ ವ್ಯಾಜ್ಯದ ಕುರಿತು ತೀರ್ಪು ನೀಡಬಾರದು. ಆದರೆ, ಆದು ಮನವಿಯ ವಿಚಾರಣೆ ನಡೆಸಿದೆ ಎಂದು ಹೇಳಿದ್ದರು.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಪೂರೈಸಲು ಸುಪ್ರೀಂ ಕೋರ್ಟ್ ಹಿಂಜರಿಯುತ್ತಿದೆ ಎಂದು ಅವರು ಆರೋಪಿಸಿದ್ದರು. ನ್ಯಾಯಮೂರ್ತಿಗಳು ಇನ್ನೊಂದು ವಿಶ್ವಕ್ಕೆ ಸೇರಿದವರೇ ಎಂದು ಅವರು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News